ಬುಧವಾರ, ಅಕ್ಟೋಬರ್ 16, 2019
22 °C

ಕೃಷ್ಣ ಕೊಲ್ಹಾರ, ವಸಂತ ಭಾರದ್ವಾಜ, ಮಲ್ಲೇಪುರಂಗೆ ‘ಅಮ್ಮೆಂಬಳ ಪ್ರಶಸ್ತಿ’

Published:
Updated:
Prajavani

ಮಂಗಳೂರು: ಕವಿ ಅಮ್ಮೆಂಬಳ ಶಂಕರನಾರಾಯಣ ನಾವಡ ಪ್ರತಿಷ್ಠಾನ ನೀಡುವ ‘ಅಮ್ಮೆಂಬಳ ಸಾಹಿತ್ಯ ಪ್ರಶಸ್ತಿ’ಗಳನ್ನು ವಿಜಯಪುರದ ಸಂಶೋಧಕ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ (2017), ಮೈಸೂರಿನ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ (2018) ಹಾಗೂ ಬೆಂಗಳೂರಿನ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್ (2019) ಅವರಿಗೆ ನೀಡಲಾಗುವುದು ಎಂದು ಪ್ರತಿಷ್ಠಾನದ ಸಂಚಾಲಕ ಪ್ರೊ.ಎ.ವಿ. ನಾವಡ ಹಾಗೂ ಡಾ.ಗಾಯತ್ರೀ ನಾವಡ ತಿಳಿಸಿದ್ದಾರೆ.

ಪ್ರಶಸ್ತಿ ಮೊತ್ತ ತಲಾ ₹10 ಸಾವಿರ ನಗದು, ಫಲಕ ಇತ್ಯಾದಿಗಳನ್ನು ಒಳಗೊಂಡಿದೆ. ಕಾರ್ಕಳ ಸಾಹಿತ್ಯ ಸಂಘ ಆಶ್ರಯದಲ್ಲಿ ಇದೇ 12ರಂದು ಕಾರ್ಕಳ ಸಂಭ್ರಮ ಸಭಾಮಂದಿರದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ನಿಟ್ಟೆ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಡಾ.ಎಂ.ಎಸ್. ಮೂಡಿತ್ತಾಯ ಪ್ರಶಸ್ತಿ ಪ್ರದಾನ ಮಾಡುವರು. ಇದೇ ಸಮಾರಂಭದಲ್ಲಿ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ ಅವರು ದಿ.ಅಮ್ಮೆಂಬಳ ಶಂಕರನಾರಾಯಣ ನಾವಡರು ಅನುವಾದಿಸಿದ ‘ಮಾಲವಿಕಾಗ್ನಿ ಮಿತ್ರ' ನಾಟಕದ ಅನುವಾದ ಬಿಡುಗಡೆ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Post Comments (+)