ಹಲ್ಲೆ ಪ್ರಕರಣ: ದುನಿಯಾ ವಿಜಯ್‌ಗೆ ಸಿಕ್ತು ಜಾಮೀನು

7
‘ಮಾಧ್ಯಮಗಳಿವೆ ಎಚ್ಚರಿಕೆಯಿಂದ ಇರು’ ಎಂದ ನ್ಯಾಯಾಧೀಶರು

ಹಲ್ಲೆ ಪ್ರಕರಣ: ದುನಿಯಾ ವಿಜಯ್‌ಗೆ ಸಿಕ್ತು ಜಾಮೀನು

Published:
Updated:
Deccan Herald

ಬೆಂಗಳೂರು: ಜಿಮ್ ತರಬೇತುದಾರ ಮಾರುತಿ ಗೌಡ ಅವರನ್ನು ಅಪಹರಿಸಿ ಹಲ್ಲೆ ಮಾಡಿದ ಆರೋಪದಡಿ ಜೈಲು ಸೇರಿರುವ ನಟ ದುನಿಯಾ ವಿಜಯ್ ಹಾಗೂ ಅವರ ಸಹಚರರಿಗೆ ನಗರದ 70ನೇ ಸಿಸಿಎಚ್‌ ನ್ಯಾಯಾಲಯ, ಜಾಮೀನು ಮಂಜೂರು ಮಾಡಿದೆ.

ಕೆಳ ಹಂತದ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ತಿರಸ್ಕೃತಗೊಂಡಿದ್ದರಿಂಗಾಗಿ ವಿಜಯ್ ಹಾಗೂ ಅವರ ಸಹಚರರು, ಸಿಸಿಎಚ್‌ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ ನ್ಯಾಯಾಲಯ, ಆರೋಪಿಗಳಿಗೆ ಜಾಮೀನು ನೀಡಿ ಸೋಮವಾರ ಆದೇಶ ಹೊರಡಿಸಿದೆ.

‘ನೀನು ಬೇರೆಯವರಿಗೆ ಮಾದರಿ. ಹುಷಾರಾಗಿ ಇರಬೇಕು. ಮಾಧ್ಯಮಗಳಿವೆ’ ಎಂದು ನ್ಯಾಯಾಧೀಶರು, ವಿಜಯ್‌ಗೆ ಎಚ್ಚರಿಕೆಯನ್ನೂ ನೀಡಿದರು.

‘₹1 ಲಕ್ಷ ಶ್ಯೂರಿಟಿ ನೀಡಬೇಕು. ತನಿಖಾಧಿಕಾರಿ ಎದುರು ಹಾಜರಾಗಿ ತನಿಖೆಗೆ ಸಹಕರಿಸಬೇಕು’ ಎಂದು ಆದೇಶದಲ್ಲಿ ಹೇಳಲಾಗಿದೆ. 

ನ್ಯಾಯಾಲಯದ ಆದೇಶ ಪ್ರತಿಯು ಸೋಮವಾರ ಸಂಜೆ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧಿಕಾರಿಗಳ ಕೈ ಸೇರಲಿದೆ. ರಾತ್ರಿ ವೇಳೆಗೆ ದುನಿಯಾ ವಿಜಯ್ ಹಾಗೂ ಅವರ ಸಹಚರರು, ಜೈಲಿನಿಂದ ಹೊರಗೆ ಬರುವ ಸಾಧ್ಯತೆ ಇದೆ.

ಇದನ್ನೂ ಓದಿ...

‘ಆರೋಪಿಗಳಿಗೆ ರಾಜಕೀಯ, ಹಣದ ಬೆಂಬಲ’

ವಿಜಯ್‌ಗೆ ಸಿಗದ ಜಾಮೀನು

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 1

  Frustrated
 • 4

  Angry

Comments:

0 comments

Write the first review for this !