ಪುಲ್ವಾಮ ದಾಳಿ ಖಂಡಿಸಿ,ಉಗ್ರರ ನಿಗ್ರಹಕ್ಕೆ ಆಗ್ರಹಿಸಿ 19ರಂದು ರಾಜ್ಯ ಬಂದ್‌ಗೆ ಕರೆ

ಸೋಮವಾರ, ಮೇ 27, 2019
23 °C
ಕನ್ನಡಪರ ಸಂಘಟನೆಗಳ ಒಕ್ಕೂಟ

ಪುಲ್ವಾಮ ದಾಳಿ ಖಂಡಿಸಿ,ಉಗ್ರರ ನಿಗ್ರಹಕ್ಕೆ ಆಗ್ರಹಿಸಿ 19ರಂದು ರಾಜ್ಯ ಬಂದ್‌ಗೆ ಕರೆ

Published:
Updated:

ಬೆಂಗಳೂರು: ಪುಲ್ವಾಮ ದಾಳಿ ಖಂಡಿಸಿ ಮತ್ತು ಭಯೋತ್ಪಾದನೆ ನಿರ್ಮೂಲನಗೆ ಆಗ್ರಹಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟ ಫೆ. 19ರಂದು ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿದೆ.

ಅಂದು ಬೆಳಿಗ್ಗೆ 10ಕ್ಕೆ ಇಲ್ಲಿನ ಟೌನ್‌ ಹಾಲ್‌ನಿಂದ ಸ್ವಾತಂತ್ರ್ಯ ಉದ್ಯಾನದವರೆಗೂ ಮೆರವಣಿಗೆ ಮಾಡಲಾಗುತ್ತದೆ ಎಂದು ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಂದು ಬೆಳಗ್ಗೆ 6ರಿಂದ ಸಂಜೆಯವರೆಗೂ ಬಂದ್ ನಡೆಯಲಿದೆ. ಆಸ್ಪತ್ರೆ, ಮಾಧ್ಯಮಗಳು, ಔಷಧಿ, ಹಾಲು ಮಾರಾಟಕ್ಕೆ ವಿನಾಯಿತಿ ಇರುತ್ತದೆ. ಬಸ್‌ಗಳು, ಸಿನಿಮಾ, ಖಾಸಗಿ ವಾಹನಗಳು ಬಂದ್ ಆಗಲಿವೆ. ಹೋಟೆಲ್‌, ಖಾಸಗಿ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಶಾಲಾ ಕಾಲೇಜ್ ಬಂದ್ ಆಗಲಿವೆ ಎಂದು ಹೇಳಿದರು.

ಬಿಡಿಎ, ಬಿಬಿಎಂಪಿ ಎಲ್ಲಾ ಕಾರ್ಖಾನೆಗಳು, ಐಟಿ-ಬಿಟಿ ಬಂದ್ ಆಗಬೇಕು. ಆದರೆ, ಯಾವುದೇ ಅಹಿತಕರ ಘಟನೆಗಳು ನಡೆಯಬಾರದು. ಅಂದು ಎಲ್ಲರೂ ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದು ವಾಟಾಳ್‌ ಮನವಿ ಮಾಡಿದರು.

ಕೈಗಾರಿಕಾ ಸಂಘಟನೆಗಳು, ಬಿಬಿಎಂಪಿ ಅಧಿಕಾರಿಗಳು ಹಾಗೂ ನೌಕರರ ಸಂಘ, ಸರ್ಕಾರಿ ನೌಕರರ ಸಂಘ, ರಸ್ತೆ ಸಾರಿಗೆ ಸಂಸ್ಥೆ ಕಾರ್ಮಿಕರ ಸಂಘ ಸೇರಿದಂತೆ ಹಲವು ಸಂಘಟನೆಗಳಿಂದ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿವೆ.

ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ, ಎನ್‌ಇಕೆಆರ್‌ಟಿಸಿ ನೌಕರರಿಂದ ಬಂದ್‌ಗೆ ಬೆಂಬಲ ವ್ಯಕ್ತವಾಗಿದೆ ಎಂದು ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಎಸ್.ನಾಗರಾಜು ಹೇಳಿದರು.

ಬರಹ ಇಷ್ಟವಾಯಿತೆ?

 • 19

  Happy
 • 0

  Amused
 • 1

  Sad
 • 0

  Frustrated
 • 9

  Angry

Comments:

0 comments

Write the first review for this !