ಬಿಜೆಪಿ ಹಿಂದುಳಿದ ಮೋರ್ಚಾದಿಂದ ರಾಜ್ಯ ಪ್ರವಾಸ

7

ಬಿಜೆಪಿ ಹಿಂದುಳಿದ ಮೋರ್ಚಾದಿಂದ ರಾಜ್ಯ ಪ್ರವಾಸ

Published:
Updated:

ಬೆಂಗಳೂರು: ಲೋಕಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಬಿಜೆಪಿ ಹಿಂದುಳಿದ ಮೋರ್ಚಾದ ನೇತೃತ್ವದಲ್ಲಿ ಎರಡು ತಂಡಗಳು ಇದೇ 16ರಿಂದ ರಾಜ್ಯ ಪ್ರವಾಸ ಮಾಡಲಿವೆ.

‘ರಾಜ್ಯದಲ್ಲಿ 25 ಸ್ಥಾನಗಳನ್ನು ಗೆಲ್ಲಲು ಮೋರ್ಚಾ ಇನ್ನಷ್ಟು ಸಕ್ರಿಯವಾಗಬೇಕು ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ನಿರ್ದೇಶನ ನೀಡಿದ್ದಾರೆ. ಅವರ ಸೂಚನೆ ಪ್ರಕಾರ, ಮೋರ್ಚಾ ಬಲಪಡಿಸಲು ಅಗತ್ಯ ಕ್ರಮ ಕೈಗೊಂಡಿದ್ದೇವೆ. ರಾಜ್ಯ ಪ್ರವಾಸದ ವೇಳೆ ತಂಡದ ಪ್ರಮುಖರು ಲೋಕಸಭಾ ಕ್ಷೇತ್ರಗಳಲ್ಲಿ ಪ್ರಮುಖರ ಸಭೆಗಳನ್ನು ನಡೆಸುವರು’ ಎಂದು ಮೋರ್ಚಾ ಅಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಶಾಸಕ ಕೆ.ಎಸ್‌.ಈಶ್ವರಪ್ಪ ನೇತೃತ್ವದ ತಂಡದಲ್ಲಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ರಘುನಾಥ ರಾವ್‌ ಮಲ್ಕಾಪುರೆ, ಎನ್‌.ಶಂಕ್ರಪ್ಪ, ಬಾಬುರಾವ್‌ ಚಿಂಚನಸೂರು ಸೇರಿದಂತೆ 10 ನಾಯಕರು ಇರುವರು. ನನ್ನ ನೇತೃತ್ವದ ತಂಡದಲ್ಲಿ ಕೋಟ ಶ್ರೀನಿವಾಸ ಪೂಜಾರಿ, ಎಂ.ಆರ್‌.ಹುಲಿನಾಯ್ಕರ್‌, ಎಲ್‌.ಕೆ. ರಾಜು ಸೇರಿದಂತೆ 14 ನಾಯಕರು ಇರುತ್ತಾರೆ’ ಎಂದು ಅವರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !