ಗುಡಿಸಲಿನಲ್ಲಿ ರಾತ್ರಿ ಕಳೆದ ಶ್ರೀರಾಮುಲು

7
ದಲಿತರ ಕಾಲೊನಿಯಲ್ಲಿ ವಾಸ್ತವ್ಯ

ಗುಡಿಸಲಿನಲ್ಲಿ ರಾತ್ರಿ ಕಳೆದ ಶ್ರೀರಾಮುಲು

Published:
Updated:

ಚಿತ್ರದುರ್ಗ: ನಾಯಕನಹಟ್ಟಿ ಸಮೀಪದ ನೆಲಗೇತನಹಟ್ಟಿ ಗ್ರಾಮದ ದಲಿತರ ಕಾಲೊನಿಯಲ್ಲಿ ವಾಸ್ತವ್ಯ ಹೂಡಿರುವ ಶಾಸಕ ಬಿ.ಶ್ರೀರಾಮುಲು ಗುಡಿಸಲಿನಲ್ಲಿ ರಾತ್ರಿ ಕಳೆದರು.

ದುರುಗಪ್ಪ ಮತ್ತು ಮಂಜುಳ ದಂಪತಿಯ ಗುಡಿಸಲಿಗೆ ಬುಧವಾರ ರಾತ್ರಿ 10.30ಕ್ಕೆ ಆಗಮಿಸಿದ ಅವರು ರಾಗಿ ರೊಟ್ಟಿ ಊಟ ಸವಿದು ನಿದ್ರೆಗೆ ಜಾರಿದರು. ಚಾಪೆ ಮೇಲೆ ಮಲಗಿದ ಶ್ರೀರಾಮುಲು ನಸುಕಿನವರೆಗೂ ನಿದ್ದೆ ಮಾಡಿದರು. ಗುರುವಾರ ಬೆಳಿಗ್ಗೆ  6ಕ್ಕೆ ಎದ್ದು ದಿನಚರಿ ಆರಂಭಿಸಿದರು.

ಗುಡಿಸಲು ಮುಂಭಾಗದಲ್ಲಿ ಮುಖ ತೊಳೆದುಕೊಂಡು ವಾಯು ವಿಹಾರಕ್ಕೆ ತೆರಳಿದರು. ಕುರಿಗಳೊಂದಿಗೆ ಕಾಲ ಕಳೆದು ಮರಳಿದರು. ಸುಮಾರು ಅರ್ಧ ಗಂಟೆ ಯೋಗಾಭ್ಯಾಸ ಮಾಡಿದರು.

ತೆಂಗಿನ ಗರಿಗಳ ತಡಿಕೆಯಲ್ಲಿ ನಿರ್ಮಿಸಿದ ಸ್ನಾನದ ಕೊಠಡಿಯಲ್ಲಿ ಸ್ನಾನ ಮುಗಿಸಿದರು. ಕಾವಿ ಬಟ್ಟೆ ಧರಿಸಿ ಗುಡಿಸಲಿನಲ್ಲಿ ಲಿಂಗ ಪೂಜೆಗೆ ಮಾಡಿದರು.

ಬರಹ ಇಷ್ಟವಾಯಿತೆ?

 • 20

  Happy
 • 2

  Amused
 • 0

  Sad
 • 4

  Frustrated
 • 3

  Angry

Comments:

0 comments

Write the first review for this !