ಗುರುವಾರ , ಸೆಪ್ಟೆಂಬರ್ 19, 2019
29 °C

‘ಟೀ ಮಾರುತ್ತಿದ್ದ ಡಿಕೆಶಿ ಕೋಟ್ಯಾಧೀಶ ಹೇಗಾದರು’

Published:
Updated:
Prajavani

ಚಿತ್ರದುರ್ಗ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಬಂಧನದಲ್ಲಿರುವ ಶಾಸಕ ಡಿ.ಕೆ.ಶಿವಕುಮಾರ್‌ ಶಿವಮೊಗ್ಗದಲ್ಲಿ ಕೊತ್ವಾಲ್ ರಾಮಚಂದ್ರನೊಂದಿಗೆ ಟೀ ಮಾರಾಟ ಮಾಡುತ್ತಿದ್ದರು. ಅದು ಹೇಗೆ ₹ 850 ಕೋಟಿ ಆಸ್ತಿ ಗಳಿಸಿದರು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಪ್ರಶ್ನಿಸಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಅದು ಡಿ.ಕೆ.ಶಿವಕುಮಾರ್‌, ಚಿದಂಬರಂ ಯಾರೂ ಇದಕ್ಕೆ ಹೊರತಾಗಿಲ್ಲ. ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಉತ್ತಮ ಕೆಲಸ ಮಾಡುತ್ತಿವೆ. ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿದ್ದಾಗಲೂ ಹೀಗೆಯೇ ಕಾರ್ಯನಿರ್ವಹಿಸಿವೆ. ಎರಡೂ ತನಿಖಾ ಸಂಸ್ಥೆಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದರು.

‘ಡಿ.ಕೆ.ಶಿವಕುಮಾರ್‌ ಅವರ ಮಗಳ ಖಾತೆಯಲ್ಲಿ ₹ 78 ಕೋಟಿ ಪತ್ತೆಯಾಗಿದೆ. ಅವರ ಪುತ್ರಿ ಇಷ್ಟು ಹಣವನ್ನು ಹೇಗೆ ಸಂಪಾದಿಸಿದರು. ಹಣ ಸಂಪಾದಿಸುವ ತಂತ್ರವನ್ನು ಬಹಿರಂಗಪಡಿಸಲಿ. ರಾಜ್ಯದ ಮಹಿಳೆಯರಿಗೆ ಇದರಿಂದ ಉಪಯೋಗವಾಗುತ್ತದೆ’ ಎಂದು ವ್ಯಂಗ್ಯವಾಡಿದರು.

‘ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನ ಇರುವವರೆಗೂ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಸೌಲಭ್ಯ ಇರಲಿಲ್ಲ. ಅಂಬೇಡ್ಕರ್‌ ಹೆಸರಿನಲ್ಲಿ ರಾಜಕೀಯ ಮಾಡುವ ಕಾಂಗ್ರೆಸ್‌ ಹಾಗೂ ಇತರ ರಾಜಕೀಯ ಪಕ್ಷಗಳು ಈ ಬಗ್ಗೆ ಧ್ವನಿ ಎತ್ತಿಲ್ಲ. ದಲಿತರು ಮತ್ತು ಹಿಂದುಳಿದ ವರ್ಗಕ್ಕೆ ಆಗಿರುವ ದ್ರೋಹವನ್ನು ಬಿಜೆಪಿ ದೇಶದ ಮುಂದಿಡಲಿದೆ’ ಎಂದರು.

Post Comments (+)