ಶುಕ್ರವಾರ, ಡಿಸೆಂಬರ್ 6, 2019
21 °C

ಎಚ್‌ಡಿಕೆ ಯೋಗ್ಯತೆ ಜಗತ್ತಿಗೇ ಗೊತ್ತು: ಬಿಎಸ್‌ವೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Yediyurappa

ಬೆಂಗಳೂರು: ‘ಸಚಿವ ವಿ.ಸೋಮಣ್ಣ ಅವರನ್ನು ಬಚ್ಚಾ ಎಂದಿರುವ ಎಚ್.ಡಿ.ಕುಮಾರಸ್ವಾಮಿ ಅವರ ಯೋಗ್ಯತೆ ಏನೆಂಬುದು ಇಡೀ ಜಗತ್ತಿಗೆ ಗೊತ್ತಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ಡಾಲರ್ಸ್‌ ಕಾಲೊನಿಯ ತಮ್ಮ ನಿವಾಸದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ‘ಸೋಮಣ್ಣ ಒಬ್ಬ ಭಾವನಾತ್ಮಕ ಜೀವಿ, ಹೀನಾಯ ಟೀಕೆಯಿಂದ ನೊಂದಿದ್ದಾರೆ. ಹೀಗಾಗಿ ದೇಹ ತ್ಯಾಗದ ಮಾತನ್ನಾಡಿದ್ದಾರೆ’ ಎಂದರು.

‘ಸೋಮಣ್ಣ ಉತ್ತಮ ರಾಜಕಾರಣಿ. ಅವರ ಬಗ್ಗೆ ಕುಮಾರಸ್ವಾಮಿ ಸಲ್ಲದ ಹೇಳಿಕೆಗಳನ್ನು ನೀಡಿದ್ದು ಸರಿಯಲ್ಲ. ಕುಮಾರಸ್ವಾಮಿ ಯೋಗ್ಯತೆ ಜಗತ್ತಿಗೆ ಗೊತ್ತಿರುವುದರಿಂದ ಅವರ ಬಗ್ಗೆ ಮಾತನಾಡಲು ಇಷ್ಟಪಡುವುದಿಲ್ಲ’ ಎಂದು ಹೇಳಿದರು.

 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು