ಭಾನುವಾರ, ಆಗಸ್ಟ್ 25, 2019
21 °C
ಶಾಸಕ ಸತೀಶ ಜಾರಕಿಹೊಳಿ ಹೇಳಿಕೆ

ಬೆಳಗಾವಿಯಲ್ಲಿ ‘ಬುದ್ಧ–ಬಸವ–ಅಂಬೇಡ್ಕರ್‌’ ವಿಶ್ವವಿದ್ಯಾಲಯ ಸ್ಥಾಪನೆ

Published:
Updated:

ಬೆಳಗಾವಿ: ‘ಜಿಲ್ಲೆಯಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಬುದ್ಧ–ಬಸವ–ಅಂಬೇಡ್ಕರ್‌ ಖಾಸಗಿ ವಿಶ್ವವಿದ್ಯಾಲಯ ಸ್ಥಾಪಿಸಲು ನಿರ್ಧರಿಸಿದ್ದೇನೆ’ ಎಂದು ಯಮಕನಮರಡಿ ಶಾಸಕ, ಕಾಂಗ್ರೆಸ್‌ ಮುಖಂಡ ಸತೀಶ ಜಾರಕಿಹೊಳಿ ತಿಳಿಸಿದರು.

ಮಾನವ ಬಂಧುತ್ವ ವೇದಿಕೆಯಿಂದ ಭಾನುವಾರ ಆಯೋಜಿಸಿದ್ದ ‘ಬಸವ ಪಂಚಮಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಾಮಾಜಿಕ ಕ್ರಾಂತಿ ಮಾಡಿದ ಮಹಾನ್‌ ನಾಯಕರ ವಿಚಾರಧಾರೆಗಳನ್ನು ಅಲ್ಲಿ ಬೋಧಿಸಲಾಗುವುದು. ಸ್ವಾಮೀಜಿಗಳು, ಚಿಂತಕರು ಹಾಗೂ ಬುದ್ಧಿಜೀವಿಗಳಿಂದ ಉಪನ್ಯಾಸ ಕೊಡಿಸಲಾಗುವುದು. ಪ್ರಗತಿಪರ ಚಿಂತನೆಗಳನ್ನು ಬಿತ್ತಲಾಗುವುದು. ಹಾಸ್ಟೆಲ್‌, ಗ್ರಂಥಾಲಯ ಸೇರಿ ಇನ್ನಿತರ  ವ್ಯವಸ್ಥೆ ಕಲ್ಪಿಸಲಾಗುವುದು’ ಎಂದು ಹೇಳಿದರು. ಆದರೆ, ಸ್ಥಳ ಮತ್ತಿತರ ವಿವರ ನೀಡಲಿಲ್ಲ.

‘ಅಧಿಕಾರದಲ್ಲಿ ಇಲ್ಲವೆಂದು ಸುಮ್ಮನೆ ಕೂರುವುದಿಲ್ಲ. ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತೇನೆ’ ಎಂದರು.

 

Post Comments (+)