ಬುಧವಾರ, ಆಗಸ್ಟ್ 4, 2021
24 °C

ಸಿಇಟಿ: ಜೂನ್‌ 1ರಿಂದ ದಾಖಲೆ ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ದಾಖಲೆಗಳ ಪರಿಶೀಲನೆ ಕಾರ್ಯ ಜೂನ್‌ 1ರಿಂದ ಆರಂಭವಾಗಲಿದೆ.

1ರಂದು ಬೆಳಿಗ್ಗೆ 11ರಿಂದ ಮಲ್ಲೇಶ್ವರ ಕೆಇಎ ಆವರಣದಲ್ಲಿ ವಿಶೇಷ ಕೆಟಗರಿಯಲ್ಲಿ ಬರುವ ದೈಹಿಕ ಅಂಗವಿಕಲರ ವೈದ್ಯಕೀಯ ಪರೀಕ್ಷೆ ನಡೆಯಲಿದೆ.

ವಿಶೇಷ ಕೆಟಗರಿಯಲ್ಲಿ ಬರುವ ಎನ್‌ಸಿಸಿ, ಕ್ರೀಡೆ, ಸೇನೆ, ಮಾಜಿ ಸೈನಿಕ, ಸ್ಕೌಟ್ಸ್, ಗೈಡ್ಸ್‌, ಸಿಎಪಿಎಫ್‌, ಮಾಜಿ ಸಿಎಪಿಎಫ್‌, ಎಜಿಎಲ್‌ನ ಅರ್ಹ ಮತ್ತು ಅರ್ಹತೆ ಗಳಿಸದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಜೂನ್‌ 4ರಂದು ಸಂಜೆ 4 ಗಂಟೆ ಬಳಿಕ ಕೆಇಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು.

ಇತರರ ದಾಖಲೆ ಪರಿಶೀಲನೆ: ಸಾಮಾನ್ಯ, ಮೀಸಲಾತಿ ಅರ್ಹತೆ ಇರುವ ಹಾಗೂ ವಿಶೇಷ ಕೆಟಗರಿಯ ಅಭ್ಯರ್ಥಿಗಳು ಆಯಾ ಜಿಲ್ಲೆಗಳಲ್ಲಿ ಸ್ಥಾಪಿಸಿರುವ ಸಹಾಯವಾಣಿ ಕೇಂದ್ರಗಳಲ್ಲಿ ಅಥವಾ ಅಭ್ಯರ್ಥಿ ದ್ವಿತೀಯ ಪಿಯುಸಿ/ 12ನೇ ತರಗತಿ ವ್ಯಾಸಂಗ ಮಾಡಿದ ಕಡೆಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಸಬಹುದು. ಆದರೆ ಹೊರನಾಡು, ಗಡಿನಾಡಿ ಕನ್ನಡಿಗರು, ಜಮ್ಮು ಮತ್ತು ಕಾಶ್ಮೀರ ವಲಸಿಗ ಅಭ್ಯರ್ಥಿಗಳು ಬೆಂಗಳೂರಿಗೇ ಬರಬೇಕು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು