ಚಾಮುಂಡೇಶ್ವರಿ ದೇಗುಲದ ಆದಾಯ ಹೆಚ್ಚಳ

ಗುರುವಾರ , ಏಪ್ರಿಲ್ 25, 2019
21 °C

ಚಾಮುಂಡೇಶ್ವರಿ ದೇಗುಲದ ಆದಾಯ ಹೆಚ್ಚಳ

Published:
Updated:

ಮೈಸೂರು: ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇಗುಲಕ್ಕೆ ವಿವಿಧ ಮೂಲಗಳಿಂದ ಬರುವ ಒಟ್ಟು ಆದಾಯ ಕಳೆದ ಬಾರಿಗಿಂತ ₹ 3.35 ಕೋಟಿಯಷ್ಟು ಹೆಚ್ಚಿದೆ.

2018–19ರ ಸಾಲಿನಲ್ಲಿ ದೇಗುಲಕ್ಕೆ ₹ 33.30 ಕೋಟಿ ಆದಾಯ ಬಂದಿದೆ. 2017–18 ರಲ್ಲಿ ₹ 29.95 ಕೋಟಿ ಆದಾಯ ಬಂದಿತ್ತು ಎಂದು ದೇಗುಲದ ಪ್ರಕಟಣೆ ತಿಳಿಸಿದೆ.

ಹುಂಡಿಯಿಂದ ₹ 11.57 ಕೋಟಿ ಹಣ ಸಂಗ್ರಹವಾಗಿದೆ. ನೇರ ಹಾಗೂ ವಿಶೇಷ ಪ್ರವೇಶ ಶುಲ್ಕದಿಂದ ₹ 10.52 ಕೋಟಿ ಹಾಗೂ ಲಾಡು ಪ್ರಸಾದ ಮಾರಾಟದಿಂದ ₹ 3.83 ಕೋಟಿ ಆದಾಯ ಸಂಗ್ರಹವಾಗಿದೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !