ಶಂಕಿತ ಉಗ್ರ ಅಬು ಜುಬೇದಾ ಮಾಹಿತಿ ಸಂಗ್ರಹಿಸಲು ಹರಸಾಹಸ

7

ಶಂಕಿತ ಉಗ್ರ ಅಬು ಜುಬೇದಾ ಮಾಹಿತಿ ಸಂಗ್ರಹಿಸಲು ಹರಸಾಹಸ

Published:
Updated:

ಮೈಸೂರು: ಅಮೆರಿಕದ ಕೇಂದ್ರ ಗುಪ್ತಚರ ಸಂಸ್ಥೆಯು (ಸಿಐಎ) 2002ರಲ್ಲಿ ಪಾಕಿಸ್ತಾನದಲ್ಲಿ ಬಂಧಿಸಿರುವ ಅಲ್‌ಖೈದಾ ಸಂಘಟನೆಯ ಶಂಕಿತ ಉಗ್ರ ಅಬು ಜುಬೇದಾ ಎಂಬಾತನ ಗೆಳೆಯರ ಕುರಿತು ಪೊಲೀಸರು ನಗರದಲ್ಲಿ ಮಾಹಿತಿ ಕಲೆಹಾಕುತ್ತಿದ್ದಾರೆ.

ಈತ 1989ರಲ್ಲಿ ವ್ಯಾಸಂಗ ಮಾಡಿದ್ದ ನಗರದ ಶಾರದಾ ವಿಲಾಸ ಕಾಲೇಜು, ವಾಸವಿದ್ದ ಉದಯಗಿರಿ ಬಡಾವಣೆ ಸೇರಿದಂತೆ ಅನೇಕ ಕಡೆ ಹುಡುಕಾಟ ನಡೆಸಿದ್ದಾರೆ. ಈತನ ಜತೆ ನಿಕಟ ಸಂಪರ್ಕ ಹೊಂದಿದ್ದ ಮಹಿಳೆಯ ಶೋಧಕಾರ್ಯವನ್ನೂ ನಡೆಸಿದ್ದಾರೆ. ಆದರೆ, ಮಹಿಳೆಯ ಸುಳಿವು ಪತ್ತೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !