ನಾನು ನಿಮ್ಮ ಸಹೋದರ, ನನಗೆ ಅವಕಾಶ ಕೊಡಿ: ಕುಮಾರಸ್ವಾಮಿ

7
ನಿಮ್ಮ ಋಣ ನನ್ನ ಮೇಲಿದೆ

ನಾನು ನಿಮ್ಮ ಸಹೋದರ, ನನಗೆ ಅವಕಾಶ ಕೊಡಿ: ಕುಮಾರಸ್ವಾಮಿ

Published:
Updated:

ಪಾಂಡವಪುರ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಶನಿವಾರ ತಾಲ್ಲೂಕಿನ ಸೀತಾಪುರ ಗ್ರಾಮದ ಹೊರವಲಯದಲ್ಲಿನ ಜಮೀನಿನಲ್ಲಿ ಮುಖ್ಭಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಭತ್ತ ನಾಟಿ ಮಾಡಿದರು

ಮಂಡ್ಯ ಜಿಲ್ಲೆಯ ಸೀತಾಪುರ ಗ್ರಾಮದಲ್ಲಿ ರೈತರ ಜೊತೆಗೂಡಿ ನಾಟಿಮಾಡಿದ ನಾಡಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಂತರ ಮಾತನಾಡಿ ನಾಟಿ ಕಾರ್ಯ ಮಾಡಿರುವುದು ನನ್ನ ಜೀವನದ ಸಾರ್ಥಕತೆ ಹಾಗೂ ಪುಣ್ಯ ಎಂದರು.

ನಂತರ ಇನ್ನೊಂದು ವಾರದಲ್ಲಿ ರೈತರ ರಾಷ್ಟ್ರೀಕೃತ ಬ್ಯಾಂಕ್‌ಗಳ  ಸಾಲವನ್ನು ಸಹ ಮನ್ನಾ ಮಾಡಲಾಗುವುದು. ಮುಂದಿನ ತಿಂಗಳಿನಿಂದ ರಾಜ್ಯದ 30 ಜಿಲ್ಲೆಗೂ ಭೇಟಿ ಕೊಡುತ್ತೇನೆ. ತಿಂಗಳಲ್ಲಿ ಒಂದು ದಿನ ರೈತರ ಜೊತೆ ಕೃಷಿ ಚಟುವಟಿಕೆಯಲ್ಲಿ ಭಾಗಯಾಗುತ್ತೇನೆ ಎಂದು ಭರವಸೆ ನೀಡಿದರು. 

ಇದೇ ವೇಳೆ ಯಾರು ಆತ್ಮಹತ್ಯೆಗೆ ಶರಣಾಗಬೇಡಿ, ನಿಮ್ಮ ಜೊತೆ ನಾವಿದ್ದೇವೆ ಎಂದು ಮನವಿ ಮಾಡಿದ ಅವರು, ಗೌರಿಗಣೇಶ ಹಬ್ಬದೊಳಗೆ, ರಾಜ್ಯದ ಆರುವರೆ ಕೋಟಿ ಜನರಿಗೆ ಒಳ್ಳೆಯ ಸುದ್ದಿ ಕೊಡುತ್ತೇನೆ ಎಂದರು.

ನಂತರ ಬಿಜೆಪಿಯ ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ, ’ನಾಟಿ ಕಾರ್ಯವನ್ನು ಮಾಡಿ ಸಿಎಂ ನಾಟಕ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಆದರೆ ನಾನು ನಾಟಕ ಮಾಡಲು ಇಲ್ಲಿಗೆ ಬಂದಿಲ್ಲ ಎಂದು ಹೇಳಿದರು

ಮಂಡ್ಯದಲ್ಲಿ  ವಿಧಾನಸಭಾ ಚುನಾವಣೆಯಲ್ಲಿ ನಿಂತ ಏಳು ಕ್ಷೇತ್ರದಲ್ಲೂ ಗೆಲ್ಲಿಸಿದ್ದೀರಿ. ನಿಮ್ಮ ಋಣ ನನ್ನ ಮೇಲಿದೆ. ನಿಮಗಾಗಿ ವಿಧಾನಸೌಧದ ಬಾಗಿಲು ಯಾವಾಗಲೂ ತೆರೆದಿರುತ್ತದೆ. ನಾನು ಒಂದು ಪ್ರಾಂತ್ಯಕ್ಕೆ ಸಿಎಂ ಅಲ್ಲ, 30 ಜಿಲ್ಲೆಯ ರೈತರನ್ನ ಉಳಿಸುವುದು ನನ್ನ ಕರ್ತವ್ಯ. ನನಗೆ ಸಮಯ ಕೊಡಿ ನಿಮ್ಮನ್ನ ಉಳಿಸುತ್ತೇನೆ. ನಾನು ಹೆದರುವುದು, ಗೌರವ ಕೊಡುವುದು ನಿಮಗೆ ಮಾತ್ರ, ಬೇರೆ ಯಾರಿಗೂ ಇಲ್ಲ. ನನಗೆ ಬೆಂಬಲಕೊಟ್ಟ ಮಾಧ್ಯಮದವರಿಗೆ ನನ್ನ ಕೃತಜ್ಞತೆ ಎಂದರು. ನಾನು ನಿಮ್ಮ ಸಹೋದರ, ನನಗೆ ಅವಕಾಶ ಕೊಡಿ ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಸಚಿವರು,ಶಾಸಕರು ಹಾಗೂ ನೂರಾರು ರೈತರು ಹಾಜರಿದ್ದರು.

 

 

 

 

ಮುಖ್ಯಮಂತ್ರಿಗೆ ಕಲಾತಂಡಗಳು ಸ್ವಾಗತ ಕೋರಿದವು. ಕಲಾವಿದ ಚಿಕ್ಕಪಾಳ್ಯ ಪ್ರಕಾಶ್‌ ತಯಾರು ಮಾಡಿದ್ದ ನಾಟಿ ನಡೆಯುವ ಗದ್ದೆಯ ಪ್ರದೇಶ ‘ಸಿನಿಮಾ ಸೆಟ್’ ನಂತೆ ಕಂಗೊಳಿಸಿತ್ತು. 

ಅರಳಕುಪ್ಪೆ ಮತ್ತು ಸೀತಾಪುರ ಗ್ರಾಮಗಳಿಗೆ ಸೇರಿದ ಹಳೆಗದ್ದೆ ಬಯಲು ಪ್ರದೇಶದಲ್ಲಿರುವ ಮಹದೇವಮ್ಮ, ಕುಳ್ಳಮ್ಮ, ಮಾಯಮ್ಮ ಹಾಗೂ ಹೇಮಲತಾ ಅವರಿಗೆ ಸೇರಿದ ಸುಮಾರು 5 ಎಕರೆ ಗದ್ದೆಯಲ್ಲಿ ನಾಟಿ ಕಾರ್ಯ ನಡೆದಿದೆ. ಅಗತ್ಯವಿರುವ ಭತ್ತದ ಪೈರುಗಳು, ಗದ್ದೆಯನ್ನು ಉಳುವೆ ಮಾಡಿ ಸಿದ್ಧಪಡಿಸಲು 25 ಜೊತೆ ಎತ್ತುಗಳು. ಸಿಎಂ ಕುಮಾರಸ್ವಾಮಿ ಅವರ ಜತೆಯಲ್ಲಿ ನಾಟಿ ಮಾಡಲು 105 ಹೆಣ್ಣಾಳುಗಳು, 50 ಗಂಡಾಳುಗಳು ನಾಟಿಯಲ್ಲಿ ಪಾಲ್ಗೊಂಡಿದ್ದರು. 


ಸಿಂಗಾರಗೊಳ್ಳುತ್ತಿರುವ ಎತ್ತಿನ ಗಾಡಿ

ಬಿಗಿ ಪೊಲೀಸ್ ಬಂದೋಬಸ್ತ್‌ ಆಯೋಜಿಸಲಾಗಿದೆ. ಅರಳಕುಪ್ಪೆ ಗ್ರಾಮದ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಪೊಲೀಸರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.

ಜಿಲ್ಲಾಧಿಕಾರಿ ಎನ್‌.ಮಂಜುಶ್ರೀ ಹಾಗೂ ಅಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !