ಗುರುವಾರ , ಸೆಪ್ಟೆಂಬರ್ 19, 2019
29 °C
ದಿನೇಶ್‌ಗೆ ‘ಕೈ’ ಉಸ್ತುವಾರಿ ಸೂಚನೆ

‘ಉಪ ಚುನಾವಣೆ: ಕೆಲಸ ಮಾಡದವರ ಪಟ್ಟಿ ಕೊಡಿ’

Published:
Updated:

ಬೆಂಗಳೂರು: ಇದೇ 19ರಂದು ಉಪ ಚುನಾವಣೆ ನಡೆಯಲಿರುವ ಚಿಂಚೋಳಿ, ಕುಂದಗೋಳ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರದ ಉಸ್ತುವಾರಿ ನೀಡಿದ್ದರೂ, ಅಲ್ಲಿಗೆ ತೆರಳದ ಸಚಿವರು, ಶಾಸಕರು ಮತ್ತು ನಿಗಮ– ಮಂಡಳಿ ಅಧ್ಯಕ್ಷರ ವಿರುದ್ಧ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಗರಂ ಆಗಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ಈ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಚಾರದಲ್ಲಿ ಭಾಗವಹಿಸದವರ ಪಟ್ಟಿಯನ್ನು ಎಐಸಿಸಿಗೆ ನೀಡುವಂತೆ ಸೂಚಿಸಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

‘ಕೈ’ಯಲ್ಲಿದ್ದ ಎರಡೂ ಕ್ಷೇತ್ರಗಳನ್ನು ಮತ್ತೆ ವಶಪಡಿಸಿಕೊಳ್ಳಲೇಬೇಕೆಂಬ ಪಣ ತೊಟ್ಟು, ಈ ಕ್ಷೇತ್ರಗಳಿಗೆ ಸಚಿವರು, ಶಾಸಕರು ಮತ್ತು ಇತರ ಪ್ರಮುಖರನ್ನು ಒಳಗೊಂಡ ತಂಡವನ್ನು ಪ್ರಚಾರ ಉಸ್ತುವಾರಿಗೆ ವೇಣುಗೋಪಾಲ್‌ ನೇಮಿಸಿದ್ದರು. ಆದರೆ, ಈ ಪೈಕಿ 30ಕ್ಕೂ ಹೆಚ್ಚು ಮಂದಿ ಪ್ರಚಾರದಲ್ಲಿ ಪಾಲ್ಗೊಳ್ಳದೆ ದೂರ ಉಳಿದಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ದಿನೇಶ್‌ ಅವರಿಂದ ವಿವರಣೆ ಕೇಳಿದ್ದಾರೆ.

Post Comments (+)