ಮಂಗಳವಾರ, ಆಗಸ್ಟ್ 20, 2019
24 °C

ಏನು ಕಾರಣ? ಆಡಳಿತ, ಪ್ರತಿಪಕ್ಷ ನಾಯಕರ ಮೊಗದಲ್ಲಿ ಗೆಲ್ಲುವ ವಿಶ್ವಾಸ

Published:
Updated:

ಬೆಂಗಳೂರು: ವಿಧಾನಸಭೆ ಕಲಾಪಕ್ಕೆ ಬರುತ್ತಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಶಾನಕರ ಮುಖದಲ್ಲಿ ವಿಶ್ವಾಸ ತುಂಬಿ ತುಳುಕುತ್ತಿದ್ದು, ಸುಪ್ರೀಂಕೋರ್ಟ್‌ನಲ್ಲಿ ಸೋಮವಾರ ಅರ್ಜಿ ಸ್ವೀಕರಿಸದೆ ಇದ್ದುದೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಸುಪ್ರೀಂಕೋರ್ಟ್‌ನ ನಿಲುವಿನಿಂದ ಕಲಾಪವನ್ನು ಇನ್ನೂ ಒಂದೆರಡು ದಿನ ಮುಂದಕ್ಕೆ ಹಾಕಲು ಅವಕಾಶ ಸಿಗಬಹುದು ಎಂದು ಎರಡೂ ಪಕ್ಷಗಳ ನಾಯಕರು ಭಾವಿಸಿದ್ದಾರೆ ಎನ್ನಲಾಗಿದೆ.

ಇದೇ ವಿಶ್ವಾಸದಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕಲಾಪಕ್ಕೆ ಮೊದಲಾಗಿ ಸಭಾಧ್ಯಕ್ಷ ರಮೇಶ್ ಕುಮಾರ್ ಅವರನ್ನು ಭೇಟಿ ಮಾಡಿದರು. ಬಿಜೆಪಿ ನಿಯೋಗ ಸಹ ಸಭಾಧ್ಯಕ್ಷರನ್ನು ಭೇಟಿ ಮಾಡಿತು.

ಸಭಾಧ್ಯಕ್ಷರು ಇಂದೇ ವಿಶ್ವಾಸ ಗೊತ್ತುವಳಿಯನ್ನು ಮತಕ್ಕೆ ಹಾಕಲಿದ್ದಾರೆಯೇ ಎಂಬ ಕುತೂಹಲ ಗರಿಗೆದರಿದೆ.

Post Comments (+)