ನಾಳೆ ಮಧ್ಯಾಹ್ನ 1ಕ್ಕೆ ಚಾಮರಾಜಪೇಟೆಯಲ್ಲಿ ಅಂತ್ಯಸಂಸ್ಕಾರ

7

ನಾಳೆ ಮಧ್ಯಾಹ್ನ 1ಕ್ಕೆ ಚಾಮರಾಜಪೇಟೆಯಲ್ಲಿ ಅಂತ್ಯಸಂಸ್ಕಾರ

Published:
Updated:

ಬೆಂಗಳೂರು: ಕೇಂದ್ರ‌ ಸಚಿವ ಅನಂತಕುಮಾರ್ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರವನ್ನು ಇಂದು‌ ಸಂಜೆಯ ಬದಲು‌ ನಾಳೆ ಮಧ್ಯಾಹ್ನ ನೆರವೇರಿಸಲಾಗುವುದು ಎಂದು ಬಿಜೆಪಿ ನಾಯಕ ಆರ್‌.ಅಶೋಕ್ ಮಾಹಿತಿ ನೀಡಿದರು.

ಈ ಕುರಿತು ಅನಂತಕುಮಾರ್ ಅವರ ಕುಟುಂಬ ಸದಸ್ಯರು, ಪಕ್ಷದ‌ ಮುಖಂಡರು ಹಾಗೂ ಯಡಿಯೂರಪ್ಪ ಜೊತೆ ಮಾತನಾಡಿದ್ದೇನೆ. ಇಂದು‌ ಸಂಜೆ‌ ಬದಲು ನಾಳೆ ಅಂತ್ಯಸಂಸ್ಕಾರ ನಡೆಸಲು ನಿರ್ಧಾರ ಕೈಗೊಂಡಿದ್ದೇವೆ. 

ಪಾರ್ಥಿವ ಶರೀರದ ದರ್ಶನಕ್ಕೆ ಇಂದು ಇಡೀ ದಿನ ಅವರ ಮನೆಯಲ್ಲೇ‌ ವ್ಯವಸ್ಥೆ ಕಲ್ಪಿಸಲಾಗಿದೆ. ನಾಳೆ ಬೆಳಿಗ್ಗೆ 8 ಗಂಟೆಗೆ ಬಿಜೆಪಿ ಕಚೇರಿಗೆ‌ ಶರೀರವನ್ನು ತರಲಾಗುವುದು. 9 ಗಂಟೆವರೆಗೆ ದರ್ಶನಕ್ಕೆ ಇರಿಸಲಾಗುತ್ತದೆ. 10 ಗಂಟೆಗೆ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. 12 ಗಂಟೆಗೆ ನ್ಯಾಷನಲ್ ಕಾಲೇಜು ಮೈದಾನದಲ್ಲಿ‌ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಮಧ್ಯಾಹ್ನ 1 ಗಂಟೆಗೆ ಚಾಮರಾಜಪೇಟೆ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದರು.

ನ್ಯಾಷ‌ನಲ್ ಕಾಲೇಜು ಮೈದಾನದ ಬಗ್ಗೆ ಅವರಿಗೆ ಬಹಳ ಅಭಿಮಾನ ಇತ್ತು. ಅವರ ಕುಟುಂಬದ ಎಲ್ಲ‌ ಕಾರ್ಯಕ್ರಮಗಳನ್ನು ಅದೇ ಮೈದಾನದಿಂದ‌ ಆರಂಭ ಮಾಡುತ್ತಿದ್ದರು. ಅವರಿಗೆ ಭಾವನಾತ್ಮಕ‌ ಸಂಬಂಧವಿರುವ ಕಾರಣ ಅಲ್ಲಿಯೇ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಿದ್ದೇವೆ. ಅವರಿಗೆ ಅಪಾರ ಅಭಿಮಾನಿಗಳಿದ್ದು ಎಲ್ಲರಿಗೂ ಅಂತಿಮ ದರ್ಶನಕ್ಕೆ ಅವಕಾಶ ಸಿಗಬೇಕು ಎನ್ನುವ ಕಾರಣಕ್ಕೆ ಇಂದು ಸಂಜೆ ಬದಲು ನಾಳೆಗೆ ಅಂತಿಮ‌ ಸಂಸ್ಕಾರವನ್ನು ಮುಂದೂಡಿಕೆ ಮಾಡಲಾಗಿದೆ ಎಂದರು.

ಬರಹ ಇಷ್ಟವಾಯಿತೆ?

 • 9

  Happy
 • 2

  Amused
 • 4

  Sad
 • 0

  Frustrated
 • 4

  Angry

Comments:

0 comments

Write the first review for this !