ಪಾದೂರಿನಲ್ಲಿ ಕಚ್ಚಾ ತೈಲ ಸಂಗ್ರಹಾಗಾರ: ಕೇಂದ್ರದ ಒಪ್ಪಿಗೆ

7

ಪಾದೂರಿನಲ್ಲಿ ಕಚ್ಚಾ ತೈಲ ಸಂಗ್ರಹಾಗಾರ: ಕೇಂದ್ರದ ಒಪ್ಪಿಗೆ

Published:
Updated:

ನವದೆಹಲಿ: ಕರ್ನಾಟಕದ ಪಾದೂರು (ಉಡುಪಿ ಸಮೀಪ) ಮತ್ತು ಒಡಿಶಾದಲ್ಲಿ ಕಚ್ಚಾ ತೈಲ ಸಂಗ್ರಹಾಗಾರ ನಿರ್ಮಾಣಕ್ಕೆ ಕೇಂದ್ರ ಸಂ‍ಪುಟವು ತಾತ್ವಿಕ ಒಪ್ಪಿಗೆ ನೀಡಿದೆ. ಪಾದೂರು ಸಂಗ್ರಹಾಗಾರದ ಸಾಮರ್ಥ್ಯ 25 ಲಕ್ಷ ಟನ್‌ ಇರಲಿದೆ.

ಈ ಎರಡು ಸಂಗ್ರಹಾಗಾರಗಳು ಸ್ಥಾಪನೆಯಾದರೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ತೈಲ ದರ ಏರಿಕೆಯಿಂದ ದೇಶಕ್ಕೆ ರಕ್ಷಣೆ ದೊರೆಯುತ್ತದೆ ಎಂದು ಕೇಂದ್ರ ಹಣಕಾಸು ಸಚಿವ ಪೀಯೂಷ್‌ ಗೋಯಲ್‌ ಹೇಳಿದ್ದಾರೆ.

ಒಡಿಶಾದ ಚಂಡಿಕೋಲ್‌ನಲ್ಲಿ ಸ್ಥಾಪಿಸಲಾಗುವ ಸಂಗ್ರಹಾಗಾರದ ಸಾಮರ್ಥ್ಯ 40 ಲಕ್ಷ ಟನ್‌. ಈ ಎರಡು ಘಟಕಗಳಲ್ಲಿ ದೇಶಕ್ಕೆ 12 ದಿನಗಳಿಗೆ ಬೇಕಾದ ಕಚ್ಚಾ ತೈಲ ಸಂಗ್ರಹಿಸಿ ಇರಿಸುವುದು ಸಾಧ್ಯವಾಗುತ್ತದೆ. 

‘ಈ ಯೋಜನೆಗಳನ್ನು ಜಾರಿ ಮಾಡುವುದಕ್ಕಾಗಿ ಖಾಸಗಿ ಸಹಭಾಗಿತ್ವವನ್ನು ಎದುರು ನೋಡುತ್ತಿದ್ದೇವೆ. ಹೂಡಿಕೆದಾರರನ್ನು ಸಂಪರ್ಕಿಸಲಾಗುವುದು’ ಎಂದು ತಿಳಿಸಿದ್ದಾರೆ. 

ಸಂಪುಟವು ತಾತ್ವಿಕ ಒಪ್ಪಿಗೆಯನ್ನಷ್ಟೇ ನೀಡಿದೆ. ಅತ್ಯಾಧುನಿಕ ವಿನ್ಯಾಸ, ಇತರ ತಾಂತ್ರಿಕ ವಿವರಗಳು ಹಾಗೂ ವೆಚ್ಚದ ಬಗ್ಗೆ ಇನ್ನಷ್ಟೇ ಚರ್ಚೆ ಆಗಬೇಕಿದೆ ಎಂದು ಹೇಳಿದ್ದಾರೆ. 

ಪೆಟ್ರೋಲಿಯಂ ಸಂಗ್ರಹವನ್ನು ಹೆಚ್ಚಿಸುವ ಯೋಜನೆಯ ಮೊದಲ ಹಂತದಲ್ಲಿ ಎರಡು ಸಂಗ್ರಹಾಗಾರಗಳನ್ನು ಸ್ಥಾಪಿಸಲಾಗಿದೆ. ಅವುಗಳಲ್ಲಿ ಒಂದು ವಿಶಾಖಪಟ್ಟಣದಲ್ಲಿದ್ದರೆ ಮತ್ತೊಂದು ಮಂಗಳೂರಿನಲ್ಲಿದೆ. ಇವುಗಳ ಸಾಮರ್ಥ್ಯ 53 ಲಕ್ಷ ಟನ್‌.  ಪಾದೂರು ಮತ್ತು ಚಂಡಿಕೋಲ್‌ನಲ್ಲಿ ಈ ಸಂಗ್ರಹಾಗಾರಗಳು ಸ್ಥಾಪನೆಯಾದರೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !