₹76 ಲಕ್ಷ ಸಮೇತ ಕಸ್ಟೋಡಿಯನ್ ಪರಾರಿ

7

₹76 ಲಕ್ಷ ಸಮೇತ ಕಸ್ಟೋಡಿಯನ್ ಪರಾರಿ

Published:
Updated:

ಬೆಂಗಳೂರು: ‘ಎಟಿಎಂ ಯಂತ್ರಗಳಿಗೆ ತುಂಬಿಸಬೇಕಿದ್ದ ₹ 76 ಲಕ್ಷ ಸಮೇತ ಕಸ್ಟೋಡಿಯನ್ ಬಿ. ಶಿವರಾಜ್ ಪರಾರಿಯಾಗಿದ್ದಾರೆ’ ಎಂದು ಆನೇಪಾಳ್ಯದ ಸೆಕ್ಯುರಿಟಿ ಏಜೆನ್ಸಿಯೊಂದರ ವ್ಯವಸ್ಥಾಪಕ ಶತ್ರುಘ್ನ ಪ್ರಸಾದ್ ಎಂಬುವರು ಅಶೋಕನಗರ ಠಾಣೆಗೆ ದೂರು ನೀಡಿದ್ದಾರೆ.

‘ನಗರದ ಹಲವು ಬ್ಯಾಂಕ್‌ಗಳಿಂದ ಹಣ ಸಂಗ್ರಹಿಸಿ, ಎಟಿಎಂ ಯಂತ್ರಗಳಿಗೆ ತುಂಬುವ ಜವಾಬ್ದಾರಿಯನ್ನು ನಮ್ಮ ಏಜೆನ್ಸಿ ವಹಿಸಿಕೊಂಡಿದೆ. ನಮ್ಮಲ್ಲಿ ಕೆಲಸ ಮಾಡುತ್ತಿದ್ದ ಶಿವರಾಜ್, ಆಗಸ್ಟ್ 28ರಂದು ಹಣದ ಸಮೇತ ನಾಪತ್ತೆಯಾಗಿದ್ದಾರೆ’ ಎಂದು ಶತ್ರುಘ್ನ ದೂರಿನಲ್ಲಿ ಬರೆದಿದ್ದಾರೆ.

‘ಎಟಿಎಂ ಯಂತ್ರಕ್ಕೆ ಹಣ ತುಂಬದ ಬಗ್ಗೆ ಬ್ಯಾಂಕ್‌ನವರೇ ಮಾಹಿತಿ ನೀಡಿದ್ದರು. ಬಳಿಕ, ಶಿವರಾಜ್‌ಗಾಗಿ ಹುಡುಕಾಟ ನಡೆಸಿದ್ದೆವು. ಆದರೆ, ಆವರು ಪತ್ತೆಯಾಗಿಲ್ಲ. ಮೊಬೈಲ್ ಸಹ ಸ್ವಿಚ್ಡ್ ಆಫ್‌ ಮಾಡಿಕೊಂಡಿದ್ದಾರೆ. ಮರುದಿನದಿಂದ ಕೆಲಸಕ್ಕೂ ಬಂದಿಲ್ಲ’ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !