‘ದಲಿತ’ ಪದ ಸಂಘಟನಾತ್ಮಕ ಶಕ್ತಿ: ಡಾ.ಅರವಿಂದ ಮಾಲಗತ್ತಿ

7

‘ದಲಿತ’ ಪದ ಸಂಘಟನಾತ್ಮಕ ಶಕ್ತಿ: ಡಾ.ಅರವಿಂದ ಮಾಲಗತ್ತಿ

Published:
Updated:
ಡಾ.ಅರವಿಂದ ಮಾಲಗತ್ತಿ

ಕಲಬುರ್ಗಿ: ‘ದಲಿತ ಪದ ಸಂಘಟನಾತ್ಮಕ ಶಕ್ತಿಯನ್ನು ಹೊಂದಿದೆ. ದೇಶದಲ್ಲಿ ವಿದ್ಯುತ್ ಸಂಚಲನ ಮೂಡಿಸುತ್ತದೆ. ಆದ್ದರಿಂದ ದಲಿತ ಪದ ಬಳಕೆ ಇರಬೇಕು’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅರವಿಂದ ಮಾಲಗತ್ತಿ ಪ್ರತಿ ಪಾದಿಸಿದರು.

ಗುಲಬರ್ಗಾ ವಿವಿಯಲ್ಲಿ ಬುಧವಾರ ಏರ್ಪಡಿಸಿದ್ದ ‘ಅಂಬೇಡ್ಕರ್ ಚಿಂತನೆಗಳ ಜಿಜ್ಞಾಸೆ’ ಕುರಿತ ಎರಡು ದಿನಗಳ ಕಮ್ಮಟದಲ್ಲಿ ಮಾತನಾಡಿದರು.

‘ದಲಿತ ಪದವನ್ನು ಬಳಸದಂತೆ ಮಾಧ್ಯಮಗಳಿಗೆ ನಿರ್ದೇಶಿಸಬೇಕು ಎಂದು ಬಾಂಬೆ ಹೈಕೋರ್ಟ್‌, ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಈಚೆಗೆ ಸೂಚಿಸಿದೆ. ಸರ್ಕಾರಿ ದಾಖಲೆಗಳಿಂದ ಆ ಪದವನ್ನು ತೆಗೆದು ಹಾಕುವಂತೆ ವ್ಯಕ್ತಿಯೊಬ್ಬರು ನ್ಯಾಯಾಲಯದ ಮೊರೆ ಹೋಗಿದ್ದರು. ದಲಿತ ಪದವನ್ನು ತೆಗೆದು ಹಾಕಿದರೆ ಸಂಘಟನೆಗಳು ನೆಲ ಕಚ್ಚುತ್ತವೆ ಎಂಬ ಹುನ್ನಾರ ಇದರ ಹಿಂದೆ ಇದೆ’ ಎಂದು ಆರೋಪಿಸಿದರು.

‘ರಾಮ, ಕೃಷ್ಣನ ವಿಚಾರಗಳ ಬಗ್ಗೆ ಚರ್ಚೆ ನಡೆಯುತ್ತದೆ. ಅವರ ಹೆಸರಿನ ಬಗ್ಗೆ ಚರ್ಚೆ ನಡೆಯುವುದಿಲ್ಲ. ಆದರೆ, ಅಂಬೇಡ್ಕರ್ ವಿಷಯದಲ್ಲಿ ಅವರ ವಿಚಾರಧಾರೆಗಳ ಬಗ್ಗೆ ಚರ್ಚಿಸದೇ ಹೆಸರಿನ ಬಗ್ಗೆ ಚರ್ಚೆಗಳಾಗುತ್ತಿವೆ’ ಎಂದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 2

  Frustrated
 • 0

  Angry

Comments:

0 comments

Write the first review for this !