ದೇವೇಗೌಡರೇ ಮುಂದಿನ ಪ್ರಧಾನಿ ಏಕಾಗಬಾರದು?: ಎಚ್‌.ವಿಶ್ವನಾಥ್‌

7
ಜೆಡಿಎಸ್ ರಾಜ್ಯಾಧ್ಯಕ್ಷ ಅಡಗೂರು ಎಚ್‌.ವಿಶ್ವನಾಥ್‌

ದೇವೇಗೌಡರೇ ಮುಂದಿನ ಪ್ರಧಾನಿ ಏಕಾಗಬಾರದು?: ಎಚ್‌.ವಿಶ್ವನಾಥ್‌

Published:
Updated:
Deccan Herald

ಮೈಸೂರು: ದೇಶದಲ್ಲಿ ಪ್ರಾಂತೀಯ ಪಕ್ಷಗಳ ಯುಗ ಆರಂಭವಾಗಿದ್ದು, ಎಚ್‌.ಡಿ.ದೇವೇಗೌಡ ಅವರೇ ಮುಂದಿನ ಪ್ರಧಾನಿಯಾಗಬಹುದು ಎಂದು ಜೆಎಡಿಎಸ್ ರಾಜ್ಯಾಧ್ಯಕ್ಷ ಅಡಗೂರು ಎಚ್‌.ವಿಶ್ವನಾಥ್‌ ಭವಿಷ್ಯ ಹೇಳಿದರು.

ದೇಶದೆಲ್ಲೆಡೆ ಈಗ ಪ್ರಾದೇಶಿಕ ಪಕ್ಷಗಳೇ ಆಡಳಿತ ಹಿಡಿದಿವೆ. ಕರ್ನಾಟಕದಲ್ಲೂ ಪ್ರಾದೇಶಿಕ ಪಕ್ಷದ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ. ಕೋಮುವಾದ ಹಾಗೂ ಜಾತ್ಯತೀತ ವಾದದ ನಡುವೆ ಈಗ ಯುದ್ಧ ನಡೆಯುತ್ತಿದ್ದು, ಪರ್ಯಾಯ ಚಿಂತನೆಯ ಫಲವಾಗಿ ಪ್ರಾದೇಶಿಕ ಪಕ್ಷಗಳು ಬಲಗೊಂಡಿವೆ. ಹಾಗಾಗಿ, ಮುಂದಿನ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳೇ ಅಧಿಕಾರ ಹಿಡಿಯುತ್ತವೆ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿ ಅವರ ಸರ್ವಾಧಿಕಾರ ಧೋರಣೆ ಜನರಲ್ಲಿ ಬೇಸರ ಮೂಡಿಸಿದೆ. ಇದು ಕೇವಲ ಮಾತಿನ ಸರ್ಕಾರ. ಮನ್‌ಕಿ ಬಾತ್, ಕಾಮ್‌ ಕಿ ಬಾತ್‌ ಆಗಲಿಲ್ಲ ಎಂಬ ಆಕ್ರೋಶವಿದೆ. ಮೋದಿಗೆ ಪರ್ಯಾಯ ನಾಯಕ ಯಾರು ಎಂಬ ಪ್ರಶ್ನೆಗೆ ದೇವೇಗೌಡರು ಉತ್ತರವಾಗಿ ಕಾಣುತ್ತಿದ್ದಾರೆ. ಅವರು ಪ್ರಾದೇಶಿಕ ಪಕ್ಷಗಳಲ್ಲಿ ಪ್ರಶ್ನಾತೀತ ನಾಯಕರಾಗಿದ್ದಾರೆ. ಅವರ ಅನುಭವ ಅವರನ್ನು ಈ ‍ಪಕ್ಷಗಳಿಗೆ ನಾಯಕನನ್ನಾಗಿ ಮಾಡಲಿದೆ ಎಂದರು.

‘ಹಾಗಾಗಿ, ಲೋಕಸಭಾ ಚುನಾವಣೆಗೆ ಜೆಡಿಎಸ್‌ ಸಜ್ಜಾಗುತ್ತಿದೆ. ಪಕ್ಷದ ರಾಜ್ಯಾಧ್ಯಕ್ಷನಾಗಿ ಪಕ್ಷವನ್ನು ಬಲಪಡಿಸಬೇಕಾದ ಜವಾಬ್ದಾರಿ ನನಗಿದೆ. ಇದಕ್ಕಾಗಿ ರಾಜ್ಯ ಪ್ರವಾಸ ಆರಂಭಿಸುತ್ತಿದ್ದೇನೆ. ಕಲಬುರ್ಗಿಯಿಂದ ಆರಂಭಿಸುವೆ. ಉತ್ತರ ಕರ್ನಾಟಕ ಹಾಗೂ ಕರಾವಳಿ ಪ್ರದೇಶಗಳಲ್ಲೂ ಪಕ್ಷವನ್ನು ಗಟ್ಟಿಗೊಳಿಸುವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಜಾತ್ಯತೀತ ಗುಣ ಹೊಂದಿದೆ. ಯಾವುದೇ ಕಾರಣಕ್ಕೂ ಕೋಮುವಾದಿ ಸ್ವಭಾವದ ಬಿಜೆಪಿ ಜತೆ ಶಾಮೀಲಾಗಬಾರದು ಎಂದು ಕಿವಿಮಾತು ಹೇಳಿದರು.

ಪ್ರಜ್ವಲ್‌ಗೆ ಉಜ್ವಲ ಭವಿಷ್ಯ:
ಪ್ರಜ್ವಲ್‌ ರೇವಣ್ಣಗೆ ಉಜ್ವಲ ಭವಿಷ್ಯವಿದೆ. ಯುವ ನಾಯಕರ ಪೈಕಿ ಅವರು ಮುಂಚೂಣಿಯಲ್ಲಿದ್ದಾರೆ. ಇಂಗ್ಲಿಷ್‌ ಹಾಗೂ ಕನ್ನಡದಲ್ಲಿ ಹಿಡಿತವಿದೆ ಎಂದರು.

ಅವರನ್ನು ದೇವೇಗೌಡರ ಮೊಮ್ಮಗ ಎಂದು ಏಕೆ ಗುರುತಿಸಬೇಕು? ಅವರಲ್ಲಿ ಅರ್ಹತೆ ಇರುವಾಗ ಅವರನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಅವರು ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 2

  Frustrated
 • 8

  Angry

Comments:

0 comments

Write the first review for this !