ಸ್ವಯಂಪ್ರೇರಿತ ದೂರು ದಾಖಲಿಸಲು ಡಿಜಿಪಿ ಸೂಚನೆ

7
ಲೇವಾದೇವಿ, ಖಾಸಗಿ ಹಣಕಾಸು ಸಂಸ್ಥೆಗಳ ದೌರ್ಜನ್ಯಕ್ಕೆ ಕಡಿವಾಣ * ಡಿವೈಎಸ್ಪಿ, ಡಿಸಿಪಿಗೆ ತನಿಖೆಯ ಉಸ್ತುವಾರಿ ಜವಾ

ಸ್ವಯಂಪ್ರೇರಿತ ದೂರು ದಾಖಲಿಸಲು ಡಿಜಿಪಿ ಸೂಚನೆ

Published:
Updated:

ಬೆಂಗಳೂರು: ‘ಲೇವಾದೇವಿಗಾರರು ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳ ಪ್ರತಿನಿಧಿಗಳು, ಸಾಲ ಮರುಪಾವತಿಗಾಗಿ ಸಾರ್ವಜನಿಕರು ಮತ್ತು ರೈತರ ಮೇಲೆ ದೌರ್ಜನ್ಯ ಎಸಗಿದ ಮಾಹಿತಿ ಬಂದರೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳಿ’ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕಿ (ಡಿಜಿಪಿ) ನೀಲಮಣಿ ರಾಜು ಅವರು ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ಆ ಸಂಬಂಧ ಸುತ್ತೋಲೆ ಹೊರಡಿಸಿರುವ ಅವರು, ‘ಸಣ್ಣ ರೈತರು, ಭೂ ರಹಿತ ಕೃಷಿ ಕಾರ್ಮಿಕರು ಹಾಗೂ ಅಶಕ್ತ ವರ್ಗದ ಜನರಿಗೆ ಋಣಭಾರ ಸಮಸ್ಯೆಗಳ ಪರಿಹಾರಕ್ಕಾಗಿ ‘ಕರ್ನಾಟಕ ಋಣಮುಕ್ತ ಮಸೂದೆ-2018’ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಅಂಥ ಜನರ ಮೇಲೆ ಸಾಲ ನೀಡಿರಬಹುದಾದ ಲೇವಾದೇವಿಗಾರರು ಅಥವಾ ಹಣಕಾಸು ಸಂಸ್ಥೆಗಳು, ಮಸೂದೆ ಜಾರಿಗೂ ಮುನ್ನ ಸಾಲ ಮರುಪಾವತಿಗೆ ಒತ್ತಡಗಳನ್ನು ಹಾಕುತ್ತಿರುವುದ ಬಗ್ಗೆ ದೂರುಗಳು ಬಂದಿವೆ. ಅಂಥ ಯಾವುದೇ ರೀತಿಯ ಕಾನೂನು ಬಾಹಿರ ಒತ್ತಡ ಹಾಗೂ ದೌರ್ಜನ್ಯಗಳು ನಡೆಯದಂತೆ ಪೊಲೀಸರು ನಿಗಾ ವಹಿಸಬೇಕು’ ಎಂದು ಸೂಚಿಸಿದ್ದಾರೆ.

ಸುತ್ತೋಲೆ ವಿವರ: 

* ಲೇವಾದೇವಿ ಕಾಯ್ದೆ, ಗಿರವಿದಾರರ ಕಾಯ್ದೆ, ದಿ ಚಿಟ್ ಫಂಡ್ಸ್‌ ಕಾಯ್ದೆಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು.

* ರೈತರಿಗೆ ಅನೌಪಚಾರಿಕ ಸಾಲ ನೀಡುವ ನಿಟ್ಟಿನಲ್ಲಿ ಕಾನೂನು ಪಾಲನೆ ಹಾಗೂ ಸಾಲ ಮರುಪಾವತಿ ಸಂಬಂಧ ಕಿರುಕುಳ ನಡೆಯದಂತೆ ಎಚ್ಚರಿಕೆ ವಹಿಸಬೇಕು

* ನಿಗದಿತ ಪ್ರಮಾಣಕ್ಕಿಂತ ಅಧಿಕ ಬಡ್ಡಿ ಹಾಗೂ ಸಾಲ ವಸೂಲಿ ಬಗ್ಗೆ ಸಾರ್ವಜನಿಕರು ಹಾಗೂ ರೈತರಿಂದ ದೂರುಗಳು ಬಂದರೆ ಅಥವಾ ಮಾಹಿತಿ ಇದ್ದರೆ, ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕು

* ಪ್ರತಿ ಜಿಲ್ಲಾ ಮತ್ತು ನಗರ ಮಟ್ಟದಲ್ಲಿ ಸಹಾಯವಾಣಿ ಕೇಂದ್ರ ತೆರೆಯಬೇಕು. 24 ಗಂಟೆಯೂ ಅದರ ನಿರ್ವಹಣೆಗಾಗಿ ಪಿಎಸ್‌ಐ ಮಟ್ಟದ ಅಧಿಕಾರಿ ನೇಮಿಸಬೇಕು 

* ಸಹಾಯವಾಣಿ ಕೇಂದ್ರ ಹಾಗೂ ನಿಯಂತ್ರಣ ಕೊಠಡಿಗಳಲ್ಲಿ ಸ್ವೀಕರಿಸುವ ದೂರುಗಳ ತನಿಖೆಯ ಉಸ್ತುವಾರಿಯನ್ನು ಜಿಲ್ಲೆಗಳಲ್ಲಿ ಎಎಸ್ಪಿ ಹಾಗೂ ಮಹಾನಗರಗಳಲ್ಲಿ ಡಿಸಿಪಿಗಳು ನೋಡಿಕೊಳ್ಳಬೇಕು 

* ಅನಧಿಕೃತ ಬಡ್ಡಿ ಹಾಗೂ ಲೇವಾದೇವಿಗಾರರ ವ್ಯವಹಾರಗಳ ಮಾಹಿತಿ ಸಂಗ್ರಹಿಸಿ ಅವರ ಮೇಲೆ ಕಣ್ಣಿಡಬೇಕು 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !