ಬಡ್ತಿ ಮೀಸಲಾತಿ ಜಾರಿ ಬೇಡ: ‘ಅಹಿಂಸಾ’ ಸಂಘಟನೆ ಮನವಿ

7

ಬಡ್ತಿ ಮೀಸಲಾತಿ ಜಾರಿ ಬೇಡ: ‘ಅಹಿಂಸಾ’ ಸಂಘಟನೆ ಮನವಿ

Published:
Updated:

ಬೆಂಗಳೂರು: ರಾಜ್ಯದಲ್ಲಿ ಬಡ್ತಿ ಮೀಸಲಾತಿ ಕಾಯ್ದೆ ಜಾರಿಗೊಳಿಸಬಾರದು ಎಂದು ಒತ್ತಾಯಿಸಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ‘ಅಹಿಂಸಾ’ ಸಂಘಟನೆ ಮನವಿ ಸಲ್ಲಿಸಿದೆ.

ಸುಪ್ರೀಂ ಕೋರ್ಟ್‌ನಲ್ಲಿ ಬಡ್ತಿ ಮೀಸಲಾತಿಯ ವಿಚಾರಣೆ ಇದೇ 12ರಂದು ನಡೆಯಲಿದೆ. ಅಲ್ಲಿಯವರೆಗೆ ಕಾದು ನಂತರ ಬಡ್ತಿ ಮೀಸಲಾತಿ ಕಾಯ್ದೆ ಜಾರಿಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

‘ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರು ಕಾಯ್ದೆ ಜಾರಿಗೆ ಸರ್ಕಾರದ ಮೇಲೆ ಒತ್ತಡ ತರುತ್ತಿದ್ದಾರೆ. ಒಂದು ವೇಳೆ ಕಾಯ್ದೆ ಜಾರಿ ಮಾಡಿದರೆ ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆಯಾಗುತ್ತದೆ. 1996ರಲ್ಲಿ ಸರ್ಕಾರ ಇದೇ ರೀತಿ ಕ್ರಮ ಕೈಗೊಂಡಿತ್ತು. ಫಲವಾಗಿ ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿದ್ದ ಜೆ.ವಾಸುದೇವನ್‌ ಒಂದು ತಿಂಗಳು ಜೈಲುವಾಸ ಅನುಭವಿಸಿದ್ದರು. ಈಗಲೂ ಮುಖ್ಯ ಕಾರ್ಯದರ್ಶಿ ಜೈಲಿಗೆ ಹೋಗಬೇಕಾಗಬಹುದು. ಹಾಗಾಗಿ, ಯಾವುದೇ ಕಾರಣಕ್ಕೂ ಕಾಯ್ದೆ ಜಾರಿ ಮಾಡಬಾರದು’ ಎಂದು ಒತ್ತಾಯಿಸಿದೆ.

‘ರಾಜ್ಯ ಸರ್ಕಾರ ಶೇ 18ರಷ್ಟು ಜನರ ರಕ್ಷಣೆಗೆ ಮುಂದಾಗುವುದು ತಪ್ಪು. ಶೇ 82ರಷ್ಟು ನೌಕರರು ಬಡ್ತಿಯಿಲ್ಲದೆ ಕೆಲಸ ನಿರ್ವಹಿಸುತ್ತಿದ್ದಾರೆ. ಈ ನೌಕರರ ಹಿತ ಕಾಪಾಡಬೇಕು’ ಎಂದು ಆಗ್ರಹಿಸಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !