ವೈದ್ಯ ಡಾ.ಗೋಪಾಲ್ ನಿಧನ

7

ವೈದ್ಯ ಡಾ.ಗೋಪಾಲ್ ನಿಧನ

Published:
Updated:
Deccan Herald

ಬೆಂಗಳೂರು: ಮಕ್ಕಳ ತಜ್ಞರಾಗಿದ್ದ ಹಿರಿಯ ವೈದ್ಯ ಡಾ.ಜಿ.ಗೋಪಾಲ್ (86) ಸೋಮವಾರ ನಗರದ ಆಸ್ಪತ್ರೆಯಲ್ಲಿ ನಿಧನರಾದರು. 

ಅವರಿಗೆ ಐವರು ಪುತ್ರಿಯರು ಮತ್ತು ಪುತ್ರ ಇದ್ದಾರೆ.  ದಲಿತ ಕುಟುಂಬದಿಂದ ಬಂದ ಅವರು, ವೈದ್ಯರಾಗಿ ಕಾಯಿಲೆಪೀಡಿತ ಬಡಮಕ್ಕಳಿಗೆ ಸದಾ ನೆರವಿನಹಸ್ತ ಚಾಚುತ್ತಿದ್ದರು. ದಶಕಗಳ ಹಿಂದೆಯೇ ಬೆಂಗಳೂರಿನ ವೈದ್ಯಕೀಯ ಕಾಲೇಜಿನಲ್ಲಿ ಚಿಕ್ಕಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗವನ್ನು ಪರಿಚಯಿಸಿದ ಅವರು, ಮಕ್ಕಳ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದಂತೆ ಹಲವು ಕೃತಿಗಳನ್ನೂ ರಚಿಸಿದ್ದರು. ಅವರಿಗೆ ರಾಜೋತ್ಸವ ಪ್ರಶಸ್ತಿ ದೊರೆತಿದೆ. ಬೆಂಗಳೂರಿನ ವಾಣಿವಿಲಾಸ ಮತ್ತು ಮೈಸೂರಿನ ಚೆಲುವಾಂಬ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾಗಿಯೂ ಅವರು ಸೇವೆ ಸಲ್ಲಿಸಿದ್ದರು.

ಇಂಗ್ಲೆಂಡ್‌, ಸ್ಪೇನ್‌, ಮೆಕ್ಸಿಕೊ, ಮಲೇಷ್ಯಾ ಸೇರಿದಂತೆ ಹಲವು ದೇಶಗಳನ್ನು ಸುತ್ತಿದ್ದ ಅವರು, ಪ್ರವಾಸದ ಅನುಭವ ಗಳನ್ನು ಪುಸ್ತಕದ ರೂಪದಲ್ಲಿ ದಾಖಲಿಸಿದ್ದರು.

ಮದ್ದೂರು ತಾಲ್ಲೂಕಿನ ಅವರ ಹುಟ್ಟೂರು ಹೆಮ್ಮನಹಳ್ಳಿಯಲ್ಲಿ ಸೋಮವಾರ ಅಂತ್ಯಕ್ರಿಯೆ ನೆರವೇರಿತು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 4

  Sad
 • 0

  Frustrated
 • 1

  Angry

Comments:

0 comments

Write the first review for this !