‘ಸೂಟ್‌ಕೇಸ್‌ನಲ್ಲಿ ಇದ್ದುದು ಎಲೆಕ್ಟ್ರಾನಿಕ್ ಸಲಕರಣೆ, ಪಕ್ಷದ ಲಾಂಛನ’

ಶನಿವಾರ, ಏಪ್ರಿಲ್ 20, 2019
26 °C

‘ಸೂಟ್‌ಕೇಸ್‌ನಲ್ಲಿ ಇದ್ದುದು ಎಲೆಕ್ಟ್ರಾನಿಕ್ ಸಲಕರಣೆ, ಪಕ್ಷದ ಲಾಂಛನ’

Published:
Updated:

ಬೆಂಗಳೂರು: ‘ಮೋದಿ ಅವರೊಂದಿಗೆ ಬಂದಿದ್ದ ಸೂಟ್‌ಕೇಸ್‌ನಲ್ಲಿ ಎಲೆಕ್ಟ್ರಾನಿಕ್ ಸಲಕರಣೆಗಳು, ಮೋದಿ ಭಾಷಣ ಮಾಡಲು ಬಳಸುವ ಡಯಾಸ್‌ನಲ್ಲಿ ಅಳವಡಿಸಲು ಬೇಕಾದ ಪಕ್ಷದ ಲಾಂಛನ ಇದ್ದವು’ಎಂದು ಚಿತ್ರದುರ್ಗ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಕೆ.ಎಸ್. ನವೀನ್ ಸ್ಪಷ್ಟಪಡಿಸಿದ್ದಾರೆ.

ಈ ಸೂಟ್‌ಕೇಸ್ ಅನ್ನು ವಿಶೇಷ ಭದ್ರತಾ ಘಟಕ (ಎಸ್‌ಪಿಜಿ) ಜತೆ ಕೊಂಡೊಯ್ಯಲಾಗುತ್ತದೆ. ಪ್ರಧಾನಿ ಪ್ರಯಾಣಿಸುವ ವೇಳೆ ಜೊತೆಗೆ ಮೂರು ಹೆಲಿಕಾಪ್ಟರ್‌ಗಳು ತೆರಳುತ್ತವೆ. ಅವುಗಳ ಪೈಕಿ ಒಂದರಲ್ಲಿ ಈ ಸೂಟ್‌ಕೇಸ್ ಮತ್ತು ನಾಲ್ವರು ಭದ್ರತಾ ಸಿಬ್ಬಂದಿ (ತಂತ್ರಜ್ಞರು) ಇರುತ್ತಾರೆ. ಮೋದಿ ವೇದಿಕೆ ತಲುಪುದಕ್ಕಿಂತ 10 ನಿಮಿಷ ಮೊದಲು ಈ ಪೆಟ್ಟಿಗೆಯನ್ನು ಅಲ್ಲಿಗೆ ತಲುಪಿಸಲಾಗುತ್ತದೆ.

ಪ್ರಧಾನಿ ಜೊತೆ ಇರುವ 13 ಬೆಂಗಾವಲು ವಾಹನಗಳಲ್ಲಿ ಇದನ್ನು ಕಳುಹಿಸಿದರೆ ತಲುಪುವುದು ವಿಳಂಬವಾಗುತ್ತದೆ. ಈ ಪೆಟ್ಟಿಗೆಯು ಪ್ರಧಾನ ಮಂತ್ರಿ ಸಚಿವಾಲಯದ ಎಸ್‌ಪಿಜಿ ಮತ್ತು ತಾಂತ್ರಿಕ ತಜ್ಞರ ತಂಡದ ಅಧೀನದಲ್ಲಿ ಇರುತ್ತದೆ ಎಂದು ನವೀನ್ ತಿಳಿಸಿದರು.

‘ಪಕ್ಷದ ಜಿಲ್ಲಾ ಘಟಕ 22 ವಾಹನಗಳನ್ನು ಬಾಡಿಗೆಗೆ ಪಡೆದಿದ್ದು, ಈ ಎಲ್ಲಾ ವಾಹನಗಳನ್ನು ಜಿಲ್ಲಾ ಪೊಲೀಸ್ ಅಧಿಕಾರಿಗಳು ಪರಿಶೀಲಿಸಿದ ಬಳಿಕ ಮೋದಿ ಸಮಾವೇಶಕ್ಕೆ ಬಳಸಲಾಗಿದೆ. ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಇರುವಾಗ ಪ್ರಧಾನ ಮಂತ್ರಿ ಬಂದಿಳಿದ ಸ್ಥಳಕ್ಕೆ ಖಾಸಗಿ ವಾಹನ ತರಲು ಹೇಗೆ ಸಾಧ್ಯ’ ಎಂದು ಅವರು ಪ್ರಶ್ನಿಸಿದರು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 2

  Frustrated
 • 2

  Angry

Comments:

0 comments

Write the first review for this !