ಫೇಸ್‌ಬುಕ್‌ ಸ್ನೇಹ ದುರ್ಬಳಕೆ; ಯುವತಿಗೆ ವಂಚನೆ

7

ಫೇಸ್‌ಬುಕ್‌ ಸ್ನೇಹ ದುರ್ಬಳಕೆ; ಯುವತಿಗೆ ವಂಚನೆ

Published:
Updated:

ಬೆಂಗಳೂರು: ಮದುವೆಯಾಗುವುದಾಗಿ ಹೇಳಿ ನಂಬಿಸಿದ್ದ ಕೇರಳದ ಯುವಕನೊಬ್ಬ, ನಗರದ ಯುವತಿಯೊಬ್ಬರನ್ನು ಗರ್ಭಿಣಿ ಮಾಡಿ ಪರಾರಿಯಾಗಿದ್ದಾನೆ.

ಈ ಸಂಬಂಧ ನೊಂದ ಯುವತಿ, ಮಡಿವಾಳ ಠಾಣೆಗೆ ದೂರು ನೀಡಿದ್ದಾರೆ. ಆರೋಪಿ ಅಜ್ಮಲ್ ಮೊಹಮ್ಮದ್ ಎಂಬಾತನ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

‘ಪೇಯಿಂಗ್ ಗೆಸ್ಟ್‌ ಕಟ್ಟಡದಲ್ಲಿ ವಾಸವಿರುವ ಯುವತಿ, ವೈದ್ಯಕೀಯ ಪದವೀಧರೆ. ಅವರ ಫೇಸ್‌ಬುಕ್‌ ಖಾತೆಗೆ ಕೆಲವು ತಿಂಗಳ ಹಿಂದಷ್ಟೇ ಆರೋಪಿ, ಫ್ರೆಂಡ್ ರಿಕ್ವೆಸ್ಟ್‌ ಕಳುಹಿಸಿದ್ದ. ಅದನ್ನು ಯುವತಿ ಒಪ್ಪಿಕೊಳ್ಳುತ್ತಿದ್ದಂತೆ, ಚಾಟಿಂಗ್ ಮಾಡಲಾರಂಭಿಸಿದ್ದ. ನಂತರ, ಮೊಬೈಲ್ ನಂಬರ್ ಸಹ ಪಡೆದುಕೊಂಡಿದ್ದ’ ಎಂದು ಪೊಲೀಸರು ಹೇಳಿದರು.

‘ಹಲವು ಬಾರಿ ಯುವತಿಯ ಮೊಬೈಲ್‌ಗೆ ಕರೆ ಮಾಡಿದ್ದ ಆರೋಪಿ, ‘ನಿನ್ನನ್ನು ಪ್ರೀತಿಸುತ್ತಿದ್ದೇನೆ. ಮದುವೆಯಾಗುತ್ತೇನೆ’ ಎಂದು  ಹೇಳಿಕೊಂಡಿದ್ದ. ಅದನ್ನು ನಂಬಿದ್ದ ಯುವತಿ, ಆತನ ಜತೆ ಸಲುಗೆ ಬೆಳೆಸಿದ್ದರು’

‘ನಗರಕ್ಕೆ ಬಂದಿದ್ದ ಆರೋಪಿ, ಯುವತಿಯ ಜೊತೆಗೆ ಮಡಿವಾಳದ ವಸತಿಗೃಹವೊಂದರಲ್ಲಿ ಉಳಿದುಕೊಂಡಿದ್ದ. ಅದೇ ವೇಳೆಯೇ ಸಂತ್ರಸ್ತೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ. ಜತೆಗೆ, ಯುವತಿಯಿಂದ ₹30 ಸಾವಿರ ಪಡೆದಿದ್ದ. ಕೆಲವು ದಿನಗಳ ನಂತರ ಆ ಹಣವನ್ನು ವಾಪಸ್‌ ಕೊಟ್ಟು, ಪುನಃ ₹70 ಸಾವಿರ ಪಡೆದಿದ್ದ’ ಎಂದು ಪೊಲೀಸರು ಹೇಳಿದರು.

‘₹70 ಸಾವಿರ ವಾಪಸ್‌ ಕೊಡುವ ನೆಪದಲ್ಲಿ ಯುವತಿಯನ್ನು ಪುನಃ ತನ್ನ ಬಳಿ ಕರೆಸಿಕೊಂಡಿದ್ದ ಆರೋಪಿ, 20 ದಿನಗಳವರೆಗೆ ವಸತಿಗೃಹದಲ್ಲಿ ಉಳಿಸಿಕೊಂಡಿದ್ದ. ಅದಾದ ಕೆಲ ತಿಂಗಳ ಬಳಿಕ ಯುವತಿ ಗರ್ಭಿಣಿಯಾಗಿದ್ದರು. ಆ ವಿಷಯ ತಿಳಿಸುತ್ತಿದ್ದಂತೆ ಆರೋಪಿ, ಮದುವೆಯಾಗುವುದಿಲ್ಲವೆಂದು ಹೇಳಿ ನಾಪತ್ತೆಯಾಗಿದ್ದಾನೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 2

  Frustrated
 • 0

  Angry

Comments:

0 comments

Write the first review for this !