ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಕುರಿತು ಸುಳ್ಳು ಸುದ್ದಿ ಹರಡಿದ ವ್ಯಕ್ತಿಗೆ ಒಂದು ವಾರ ಸ್ವಚ್ಛತಾ ಶಿಕ್ಷೆ

Last Updated 29 ಏಪ್ರಿಲ್ 2020, 13:14 IST
ಅಕ್ಷರ ಗಾತ್ರ

ನಿಡಗುಂದಿ(ವಿಜಯಪುರ): ಪಟ್ಟಣದ ಯುವಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಕೋವಿಡ್ ಕುರಿತು ಸುಳ್ಳು ಮಾಹಿತಿ ಹರಿಬಿಟ್ಟಿದ್ದಕ್ಕೆ ನಿಡಗುಂದಿ ತಹಶೀಲ್ದಾರ್, ಒಂದು ವಾರ ಪಟ್ಟಣದ ಸ್ಬಚ್ಛತಾ ಕಾರ್ಯಕ್ಕೆ ನಿಯೋಜಿಸಿ ಆದೇಶಿಸಿದ್ದಾರೆ.

ಪಟ್ಟಣದ ಪ್ರಕಾಶ ಹನುಮಂತ ಚಳ್ಳಮರದ (24)ಸ್ವಚ್ಛತಾ ಕೆಲಸಕ್ಕೆ ನಿಯೋಜನೆಯಾದ ವ್ಯಕ್ತಿ.ಈತ ಕೋವಿಡ್ ಬಗ್ಗೆ ಇಲ್ಲಸಲ್ಲದ ಸುಳ್ಳು ಸುದ್ದಿ, ವಿಡಿಯೋಗಳನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟು, ಸಾಮರಸ್ಯ ಹಾಗೂ ಶಾಂತಿ ಭಂಗ ಮಾಡುತ್ತಿದ್ದು, ಇವನ ವಿರುದ್ಧ ಕ್ರಮ ಕೈಗೊಳ್ಳುವಂತೆ ನಿಡಗುಂದಿ ಪಿಎಸ್ಐ ಸಿ.ಬಿ. ಚಿಕ್ಕೋಡಿ ಅವರು ತಹಶೀಲ್ದಾರ್ ಶಿವಲಿಂಗಪ್ರಭು ವಾಲಿ ಅವರಿಗೆ ಮನವಿ ಸಲ್ಲಿಸಿದ್ದರು.

ಈ ದೂರಿನ ಮೇರೆಗೆ ಆರೋಪಿ ಪ್ರಕಾಶ ಚಳ್ಳಮರದನಿಗೆ ಏ.30ರಿಂದ ಮೇ 5ರವರೆಗೆ ತಮ್ಮ ವ್ಯಾಪ್ತಿಯಲ್ಲಿ ಬರುವ ಸ್ವಚ್ಛತಾ ಕೆಲಸಗಳನ್ನು ಮಾಡಿಸಲು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಒಪ್ಪಿಸಿ ಆದೇಶಿಸಿದ್ದಾರೆ. ಮೇ 6 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲು ಆದೇಶಿಸಲಾಗಿದೆ.

ಈ ಆದೇಶ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಡುವವರಿಗೆ ಪಾಠವಾಗಿದ್ದು, ವಿಶಿಷ್ಟ ರೀತಿಯ ಶಿಕ್ಷೆ ಕೇಳಿ ತಾಲ್ಲೂಕಿನಾದ್ಯಂತ ಇದೇ ವಿಷಯದ ಚರ್ಚೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT