ಮಗಳಿಗೆ ವಿಷ ನೀಡಿ ಸಾಯಿಸಿದ ತಂದೆ

7

ಮಗಳಿಗೆ ವಿಷ ನೀಡಿ ಸಾಯಿಸಿದ ತಂದೆ

Published:
Updated:
Prajavani

ಯಲ್ಲಾಪುರ: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ 11 ವರ್ಷದ ಮಗಳನ್ನು ತಾಲ್ಲೂಕಿನ ಹೆಮ್ಮಾಡಿಯ ಕುಂಬ್ರಿಯಲ್ಲಿ ಬುಧವಾರ ತಂದೆಯೇ ಕೊಲೆ ಮಾಡಿ, ಪರಾರಿಯಾಗಿದ್ದಾನೆ.

ನಯನಾ ನಾಗರಾಜ ಪೂಜಾರಿ ಮೃತ ಬಾಲಕಿ. ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಆಕೆಯನ್ನು ತಂದೆ ನಾಗರಾಜ ಪೂಜಾರಿ ವಿಷ ನೀಡಿ ಕೊಲೆ ಮಾಡಿದ್ದಾಗಿ ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

ಹೆಣ್ಣು ಮಕ್ಕಳಾಗಿದ್ದಕ್ಕೆ ಹತಾಶೆ: ಆರೋಪಿಗೆ ಮೂವರು ಹೆಣ್ಣು ಮಕ್ಕಳಿದ್ದು, ತನ್ನ ವಂಶ ಬೆಳೆಯುವುದಿಲ್ಲ ಎಂದು ಭಾವಿಸಿ ಹತಾಶನಾಗಿದ್ದ. ಅಲ್ಲದೇ ನಯನಾಳ ಹೃದಯ ಚಿಕಿತ್ಸೆಗೆ ಸಾಕಷ್ಟು ಹಣ ವ್ಯಯಿಸಿದ್ದ. ಸಾರಾಯಿ ಸೇವಿಸಿ, ಮನೆಗೆ ಬಂದು ದಿನವೂ ಪತ್ನಿ, ಮಕ್ಕಳೊಂದಿಗೆ ಗಲಾಟೆ ಮಾಡುತ್ತಿದ್ದ. ಇದರಿಂದ ಮನನೊಂದ ಪತ್ನಿಯು ಮಕ್ಕಳನ್ನು ಪತಿಯ ಮನೆಯಲ್ಲೇ ಬಿಟ್ಟು ಹೋಗಿದ್ದರು. 

ಈ ಸಂಬಂಧ ಕಾರವಾರದ ಮಹಿಳಾ ಸಂಘದವರು ನಾಗರಾಜ ಪೂಜಾರಿ, ಪತ್ನಿ, ನಯನಾ ಹಾಗೂ ಆಕೆಯ ತಂಗಿ ಸಹನಾರನ್ನು ಕರೆಸಿ ಕೌನ್ಸೆಲಿಂಗ್ ಮಾಡಿದ್ದರು. ಆಗ ಬಾಲಕಿಯರು ತಮಗೆ ತಾಯಿ ಬೇಕು ಎಂದು ಹೇಳಿದ್ದರು. ಇದರಿಂದ ಸಿಟ್ಟಾದ ನಾಗರಾಜ, ಜ.5ರಂದು ಇಬ್ಬರ ಮೇಲೂ ಪೊರಕೆಯಿಂದ ಹಲ್ಲೆ ಮಾಡಿದ್ದ. ಅಲ್ಲದೇ ಜ.9ರಂದು ತನ್ನ ಮನೆಯಲ್ಲಿ ನಯನಾಳನ್ನು ವಿಷ ನೀಡಿ ಕೊಲೆ ಮಾಡಿದ್ದಾನೆ. ಸಂಬಂಧಿಕರು ಮನೆಗೆ ಬಂದಾಗ ವಿಚಾರ ಬೆಳಕಿಗೆ ಬಂತು ಎಂದು ಪೊಲೀಸರು ತಿಳಿಸಿದ್ದಾರೆ

ಸಿ.ಪಿ.ಐ ಡಾ.ಮಂಜುನಾಥ ನಾಯಕ ಹಾಗೂ ಪಿ.ಎಸ್.ಐ ಚಂದ್ರಶೇಖರ ಹರಿಹರ ಸ್ಥಳಕ್ಕೆ ಭೇಟಿ ನೀಡಿದ್ದು, ಸಿವಿಲ್ ಹೆಡ್ ಕಾನ್‌ಸ್ಟೆಬಲ್ ಗಣೇಶ ಗುರುವ ಪ್ರಕರಣ ದಾಖಲಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !