ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಆರಂಭಕ್ಕೂ ಮುನ್ನವೇ ಪಠ್ಯಪುಸ್ತಕ ಲಭ್ಯ : ಬಿಇಒ ರಾಜೀವ್

ಒಂದು ತಿಂಗಳ ನಂತರ ಶೂ ವಿತರಣೆಗೆ ಕ್ರಮ
Last Updated 22 ಮೇ 2018, 7:53 IST
ಅಕ್ಷರ ಗಾತ್ರ

ಹೊನ್ನಾಳಿ:  ಶಾಲೆಗಳು ಆರಂಭವಾಗಿ ಎರಡು ತಿಂಗಳು ಕಳೆದರೂ ಪಠ್ಯಪುಸ್ತಕಗಳು ಲಭ್ಯವಿರುವುದಿಲ್ಲ. ಆದರೆ, ಈ ಬಾರಿ ಶಾಲಾ ಆರಂಭಕ್ಕೂ ಮುನ್ನವೇ ಶೇ 75ರಷ್ಟು ಸರ್ಕಾರಿ ಶಾಲಾ ಪುಠ್ಯಪುಸ್ತಕಗಳು ಹಾಗೂ ಶೇ 95ರಷ್ಟು ಅನುದಾನ ರಹಿತ ಶಾಲೆಗಳ ಪಠ್ಯಪುಸ್ತಕಗಳು ಶಿಕ್ಷಣ ಇಲಾಖೆಯ ಉಗ್ರಾಣ ತುಂಬಿಕೊಂಡಿದೆ.

ಕರ್ನಾಟಕ ಪಠ್ಯ ಪುಸ್ತಕ ಸೊಸೈಟಿ ಈ ಬಾರಿ ಶಾಲಾ ಅವಧಿಗೂ ಮುನ್ನವೇ ಪುಸ್ತಕಗಳನ್ನು ಸರಬರಾಜು ಮಾಡುವ ಮೂಲಕ ತನ್ನ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿದೆ.

ಜೂನ್ 1ರಿಂದ ವಿತರಣೆ : ಮೇ 21ರಂದು ತಾಲ್ಲೂಕಿನ ನ್ಯಾಮತಿ, ಸುರಹೊನ್ನೆ, ಸವಳಂಗ, ಬೆಳಗುತ್ತಿ, ಚೀಲೂರು, ಒಡೆಯರ ಹತ್ತೂರು, ಕಸಬಾ, ಗೋವಿನಕೋವಿ, ಎಚ್‌.ಜಿ. ಹಳ್ಳಿ, ಅರಕೆರೆ, ತರಗನಹಳ್ಳಿ, ಕುಂದೂರು, ಯಕ್ಕನಹಳ್ಳಿ ಸೇರಿದಂತೆ ಸುಮಾರು 20 ಕ್ಲಸ್ಟರ್ ಗಳಿಗೆ ಪಠ್ಯಪುಸ್ತಕ ಗಳನ್ನು ಬಿಆರ್‌ಸಿ ಕಚೇರಿಯಲ್ಲಿ ವಿತರಿಸುವ ವ್ಯವಸ್ಥೆ ಮಾಡಲಾಗಿದೆ. ಇದರಿಂದಾಗಿ ಜೂನ್ 1ರಂದು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ವಿತರಿಸುವಂತೆ ಬಿಇಒ ಆದೇಶ ಮಾಡಿದ್ದಾರೆ.

ಸಮವಸ್ತ್ರ ವಿತರಣೆ : 1ನೇ ತರಗತಿಯಿಂದ 10ನೇ ತರಗತಿವರೆಗಿನ ಎಲ್ಲಾ ಸರ್ಕಾರಿ ಹಾಗೂ ಅನುದಾನರಹಿತ ಶಾಲೆಗಳ ವಿದ್ಯಾರ್ಥಿಗಳಿಗೆ ಸಮವಸ್ತ್ರಗಳನ್ನು ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

8 ರಿಂದ 10ರವರೆಗಿನ ವಿದ್ಯಾರ್ಥಿನಿಯರಿಗೆ ಮಾತ್ರ ಸಮವಸ್ತ್ರ ಬಂದಿಲ್ಲ. ಶೂ ಗಳು ಒಂದು ತಿಂಗಳು ತಡವಾಗಿ ಬರಬಹುದು ಎಂದು ಶಿಕ್ಷಣ ಇಲಾಖೆಯ ಸಹಾಯಕ ಆಯುಕ್ತರೇ ಹೇಳಿಕೆ ನೀಡಿರುವುದರಿಂದ ಒಂದು ತಿಂಗಳ ನಂತರ ಶೂ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎನ್ನುತ್ತಾರೆ ಬಿಇಒ ರಾಜೀವ್.

ಮೇ 21ರಿಂದ ಒಂದು ವಾರ ಕಾಲ ಪಠ್ಯ ಪುಸ್ತಕ ಹಾಗೂ ಸಮವಸ್ತ್ರಗಳನ್ನು ವಿತರಿಸಲಾಗುವುದು. ಆದ್ದರಿಂದ ಸಂಬಂಧಪಟ್ಟ ಶಾಲೆಯ ಮುಖ್ಯೋಪಾಧ್ಯಾಯರು ಪಠ್ಯಪುಸ್ತಕ, ಸಮವಸ್ತ್ರಗಳನ್ನು ತೆಗೆದುಕೊಂಡು ಹೋಗಬೇಕು ಎಂದು ಬಿಇಒ ತಿಳಿಸಿದ್ದಾರೆ.

ತಾಲ್ಲೂಕಿನಲ್ಲಿ ಮೇ 28 ರಂದು ಶಾಲೆಗಳನ್ನು ಆರಂಭಿಸುವಂತೆ ಆದೇಶ ಹೊರಡಿಸಲಾಗಿದೆ. ಆದ್ದರಿಂದ ಆಯಾ ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರು ಮತ್ತು ಸಿಬ್ಬಂದಿ ಶಾಲೆಗಳನ್ನು ಸ್ವಚ್ಛಗೊಳಿಸುವ ಮೂಲಕ ಶುಚಿತ್ವವನ್ನು ಕಾಪಾಡಿಕೊಳ್ಳುವಂತೆ ರಾಜೀವ್ ಸೂಚನೆ ನೀಡಿದ್ದಾರೆ.

ವಿಶೇಷ ವರದಿ : ಎನ್.ಕೆ. ಆಂಜನೇಯ ಹೊನ್ನಾಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT