ಹೊನ್ನಾವರ ಸಮೀಪದ ಕರ್ಕಿ ಮಠದ ಬಳಿ ಭೀಕರ ಅಪಘಾತ: ಐವರು ಸಾವು

7

ಹೊನ್ನಾವರ ಸಮೀಪದ ಕರ್ಕಿ ಮಠದ ಬಳಿ ಭೀಕರ ಅಪಘಾತ: ಐವರು ಸಾವು

Published:
Updated:
Deccan Herald

ಕಾರವಾರ: ಹೊನ್ನಾವರ ಸಮೀಪದ ಕರ್ಕಿ ಮಠದ ಬಳಿ ಟೆಂಪೋ ಮತ್ತು ಟ್ಯಾಂಕರ್ ನಡುವೆ ಶನಿವಾರ ಸಂಜೆ ನಡೆದ ಭೀಕರ ಅಪಘಾತದಲ್ಲಿ ಐವರು ಮೃತಪಟ್ಟಿದ್ದಾರೆ. ಮೃತರಲ್ಲಿ ಬಾಲಕಿ ಮತ್ತು ಮಹಿಳೆಯೂ ಸೇರಿದ್ದಾರೆ.

ಕುಮಟಾ ನಾಗೂರಿನ ಸಮಂತಾ ಮಡಿವಾಳ (34), ಸಿಂಚನಾ ಮಡಿವಾಳ (6), ಕುಮಟಾ ಬಗ್ಗೋಣದ ಕಮಲಾಕರ ಭಂಡಾರಿ (50), ಹೊನ್ನಾವರ ಕರ್ಕಿಯ ಮೋಹನ ಮೇಸ್ತಾ (50), ಹೊನ್ನಾವರ ನಗರೆಯ ನಾಗರಾಜ ನಾಯ್ಕ (26) ಮೃತರು. ಅವರೆಲ್ಲರೂ ಕುಮಟಾದಿಂದ ಹೊನ್ನಾವರದತ್ತ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಾಗುತ್ತಿದ್ದ ಟೆಂಪೋದಲ್ಲಿ ಪ್ರಯಾಣಿಸುತ್ತಿದ್ದರು.

ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, 15ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಅವರನ್ನು ಹೊನ್ನಾವರ ಸರ್ಕಾರಿ ಆಸ್ಪತ್ರೆ ಮತ್ತು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಟೆಂಪೋದ ಅರ್ಧಕ್ಕೂ ಹೆಚ್ಚು ಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅಪಘಾತದ ತೀವ್ರತೆಯನ್ನು ಹೇಳುವಂತಿದೆ. ಟ್ಯಾಂಕರ್‌ನ ಚಾಲಕನಿರುವ ಭಾಗವೂ ಜಖಂಗೊಂಡಿದೆ.

ಸ್ಥಳಕ್ಕೆ ಹೊನ್ನಾವರ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ.


ಹೊನ್ನಾವರದಲ್ಲಿ ಶನಿವಾರ ಟ್ಯಾಂಕರ್‌ಗೆ ಮುಖಾಮುಖಿ ಡಿಕ್ಕಿಯಾಗಿ ಸಂ‍ಪೂರ್ಣ ನಜ್ಜುಗುಜ್ಜಾಗಿರುವ ಟೆಂಪೋ.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 3

  Sad
 • 0

  Frustrated
 • 0

  Angry

Comments:

0 comments

Write the first review for this !