ಗುರುವಾರ , ಆಗಸ್ಟ್ 22, 2019
21 °C

‘ನೆರೆ: ವೈಮಾನಿಕ ಸಮೀಕ್ಷೆಗೆ ಹೇಳುವೆ’

Published:
Updated:

ಬೆಂಗಳೂರು: ‘ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿಯಿಂದ ಆಗಿರುವ ಹಾನಿಯ ಬಗ್ಗೆ ವೈಮಾನಿಕ ಸಮೀಕ್ಷೆ ನಡೆಸಲು ಎಚ್‌.ಡಿ.ಕುಮಾರಸ್ವಾಮಿಗೆ ಹೇಳುವೆ. ಸದ್ಯ ಆವರಿಗೆ ಆರೋಗ್ಯ ಸರಿ ಇಲ್ಲ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದರು.

‘ನಾನು ಹೋಗಿ ನೆರೆ ಪರಿಸ್ಥಿತಿ ನೋಡಿದರೆ ವಿಧಾನಸಭೆಯಲ್ಲಿ ಅದನ್ನು ಹೇಳುವುದು ಸಾಧ್ಯವಾಗುವುದಿಲ್ಲ. ಹೀಗಾಗಿ ಅವರೇ ಹೋಗಿ ಬರಬೇಕು’ ಎಂದು ಮಂಗಳವಾರ ಇಲ್ಲಿ ಪಕ್ಷದ ಪರಿಶಿಷ್ಟ ಜಾತಿ, ಪಂಗಡದ ಘಟಕದ ಸಭೆ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

‘ದಲಿತ ಸಮುದಾಯವನ್ನೇ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿ ಮಾಡಲಾಗಿದೆ. ದಲಿತರು, ಹಿಂದುಳಿದ
ವರು, ಅಲ್ಪಸಂಖ್ಯಾತರ ಪರ ಪಕ್ಷ ಈ ಮೊದಲಿನಿಂದಲೂ ಹೋರಾಡುತ್ತಿದೆ. ಬುಧವಾರ ನಡೆಯುವ ಪಕ್ಷದ ಸಮಾವೇಶದಲ್ಲಿ ಮುಂದಿನ ಕಾರ್ಯಕ್ರಮ ಪ್ರಕಟಿಸಲಿದ್ದೇವೆ’ ಎಂದರು.

Post Comments (+)