ಚಿತ್ರಗಳಲ್ಲಿ ಅರಳಿದ ಬಾಪೂಜಿ

7

ಚಿತ್ರಗಳಲ್ಲಿ ಅರಳಿದ ಬಾಪೂಜಿ

Published:
Updated:
Deccan Herald

ಮಹಾತ್ಮ ಗಾಂಧಿ ರಸ್ತೆಯ ಮೆಟ್ರೊ ಹೂ ಹಾದಿಯಲ್ಲಿ ಗಾಂಧಿ ಮತ್ತೊಮ್ಮೆ ಹುಟ್ಟುತ್ತಿದ್ದರು. ಒಂದೆರಡು ಬಗೆಗಳಲ್ಲಿ ಅಲ್ಲ, ಮೂವತ್ತು ಬಗೆಗಳಲ್ಲಿ. ಕೆಲವೆಡೆ ಸ್ಕೆಚ್‌ ಆದರೆ ಇನ್ನೂ ಕೆಲವೆಡೆ ಅವರ ಯೋಚನೆಗಳೇ ಮೈತಳೆಯುತ್ತಿದ್ದವು.

ವಿಸ್ಮಯ ಆರ್ಟ್‌ ಗ್ಯಾಲರಿಯಲ್ಲಿ, ಎನ್‌.ಎಸ್‌. ಕುಂಬಾರ್‌ ಆರ್ಟ್‌ ಅವರು ಮಹಾತ್ಮ ಆನ್‌ ಕ್ಯಾನ್ವಸ್‌ನ ಯೋಚನೆ ಹೀಗೆ ಕ್ರಿಯೆಗಿಳಿದಿದ್ದು. ‘ಸ್ವದೇಶಿ’ ತತ್ವದ ಪರಿಕಲ್ಪನೆಯಲ್ಲಿ ಆರ್ಟ್‌ ಮ್ಯಾಟರ್ಸ್‌ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಿತ್ತು. ಅದರಲ್ಲಿ ಭಾಗವಹಿಸಿದ್ದ ಕಲಾವಿದರು ಹಲವಾರು ಚಿತ್ರಗಳಲ್ಲಿ ಬಾಪೂಜಿಯನ್ನು ಬಿಡಿಸಿದರು.

ಗಾಂಧಿ ಜಯಂತಿಯ ರಜೆಯನ್ನು ಅನುಭವಿಸಲು ಎಂ.ಜಿ ರಸ್ತೆಯಲ್ಲಿ ಕಾಲಾಡಿಸುತ್ತಿದ್ದವರೆಲ್ಲ, ಒಮ್ಮೆ ಆ ದಾರಿಗೂ ಹೋಗಿ, ಗಾಂಧಿ ದರ್ಶನ ಮಾಡಿಬಂದರು. ಗಾಂಧೀಜಿ ಬಗೆಗೆ ಇವರ ಒಲವು, ಕುಂಚಗಳಲ್ಲಿ ಅವರ ನಿಲುವು ಎರಡೂ ಎದ್ದು ಕಾಣುತ್ತಿದ್ದವು. ಮೆಟ್ರೊ ರಂಗೋಲಿಯಲ್ಲಿ ಎಲ್ಲ ವಯೋಮಾನದವರ ಕಲರವ ಇತ್ತು. ಗಾಂಧೀಜಿ ಚಿತ್ರಗಳ ಮುಂದೆ ಕೆಲವರು ಸ್ತಬ್ಧರಾದರೆ, ಇನ್ನೂ ಕೆಲವರು ಬೆರಗುಗಣ್ಣಿನಿಂದ ಗಮನಿಸುತ್ತಿದ್ದರು. ಕೇವಲ ಕೆಲವು ಗೆರೆಗಳು, ಆಕೃತಿಯಾಗುವ ಮಹಾ ಬೆರಗು ಅವರ ಕಣ್ಣಲ್ಲಿ ಕಾಣುತ್ತಿತ್ತು.

ಮ್ಯಾಟರ್ಸ್‌ ತಂಡದ ಸ್ವದೇಶಿ ಪರಿಕಲ್ಪನೆ ಕೇವಲ ಚಿತ್ರ ಪ್ರದರ್ಶನದ್ದಾಗಿರಲಿಲ್ಲ. ಸ್ಪರ್ಧೆಯನ್ನೂ ಏರ್ಪಡಿಸಲಾಗಿತ್ತು. ಮೂರು ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ನಗದು ಬಹುಮಾನ ವಿತರಿಸಲಾಯಿತು. ಪ್ರಥಮ ಬಹುಮಾನ ₹ 5,000, ದ್ವಿತೀಯ ₹ 3,000, ತೃತೀಯ ಬಹುಮಾನ ₹2,000. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !