ಗುರುವಾರ , ಡಿಸೆಂಬರ್ 12, 2019
17 °C

ನಗರಸಭೆ ಗಾದಿಗೇರಿದ ಪೌರಕಾರ್ಮಿಕ ಮಹಿಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ (ಚಿಕ್ಕಬಳ್ಳಾಪುರ): ಪೌರಕಾರ್ಮಿಕರಾಗಿ ಮನೆ–ಮನೆ ಕಸ ಸಂಗ್ರಹಿಸುತ್ತಿದ್ದ ಕೆ.ರಾಣಿ ಅವರು ಈಚೆಗೆ ನಡೆದ ಚುನಾವಣೆಯಲ್ಲಿ ಭಾರತೀಯ ಪ್ರಜಾ ಪಕ್ಷದಿಂದ ನಗರಸಭೆ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ.

ರಾಣಿ ಅವರು ನಗರಸಭೆಯಲ್ಲಿ ಹೊರಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿದ್ದರು. ಸ್ಥಳೀಯ ಆಡಳಿತವು 2008ರಲ್ಲಿ ಸ್ತ್ರೀಶಕ್ತಿ ಸಂಘಗಳ ಮೂಲಕ ಕಸ ಸಂಗ್ರಹ ಣೆಗೆ ಅರ್ಜಿ ಆಹ್ವಾನಿಸಿತ್ತು. ರಾಣಿ ಅವರು ಮುತ್ತುಮಾರಿಯಮ್ಮ ಸ್ತ್ರೀಶಕ್ತಿ ಸಂಘವನ್ನು ರಚನೆ ಮಾಡಿಕೊಂಡು ಕಸ ಸಂಗ್ರಹಣೆಗೆ ಮುಂದಾದರು. ಅಂದಿನಿಂದ 20 ಮಹಿಳೆಯರೊಂದಿಗೆ ಮನೆ–ಮನೆಗೂ ತೆರಳಿ ಕಸ ಸಂಗ್ರಹಣೆ ಮಾಡುತ್ತಿದ್ದಾರೆ.

ನಗರ ಸ್ವಚ್ಛತೆಗೆ ಒತ್ತು ನೀಡು ತ್ತೇನೆ ಎಂದು ರಾಣಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು