ಬಾಲಕಿ ಪ್ರತಿಕೃತಿ ಅಂತ್ಯಸಂಸ್ಕಾರ

7
ಭೂಕುಸಿತ: 53 ದಿನವಾದರೂ ಸಿಗದ ಮಂಜುಳಾ ಸುಳಿವು

ಬಾಲಕಿ ಪ್ರತಿಕೃತಿ ಅಂತ್ಯಸಂಸ್ಕಾರ

Published:
Updated:
Deccan Herald

ಮಡಿಕೇರಿ: ಕೊಡಗು ಜಿಲ್ಲೆಯ ಜೋಡುಪಾಲ ಗ್ರಾಮವು ಬುಧವಾರ ಮನಮಿಡಿಯುವ ಸನ್ನಿವೇಶಕ್ಕೆ ಸಾಕ್ಷಿಯಾಯಿತು.

ಭೂಕುಸಿತದಿಂದ ಕಣ್ಮರೆಯಾಗಿದ್ದ ಮಂಜುಳಾ (15) ಸುಳಿವು ಇದುವರೆಗೂ ಸಿಗದೆ ಕಂಗಾಲಾಗಿದ್ದ ಕುಟುಂಬವು ಆಕೆಯ ಪ್ರತಿಕೃತಿಯನ್ನೇ ಅಂತ್ಯ ಸಂಸ್ಕಾರ ನಡೆಸಿತು.

ಬೆಟ್ಟತ್ತೂರಿನ ನಿವಾಸಿ ಕುಡಿಯರ ಸೋಮಯ್ಯ ಸಹೋದರಿ ಗೌರಮ್ಮ ಜೋಡುಪಾಲದಲ್ಲಿ ವಾಸವಿದ್ದರು. ಅವರ ಮನೆಯಲ್ಲಿ ಸೋಮಯ್ಯ ಪುತ್ರಿ ಮಂಜುಳಾ ಸಹ ವಾಸವಿದ್ದಳು. ಆಗಸ್ಟ್‌ 17ರಂದು ಸಂಭವಿಸಿದ್ದ ಭೂಕುಸಿತದಲ್ಲಿ ಕಣ್ಮರೆಯಾಗಿದ್ದಳು.

ಭೂಕುಸಿತದ ಸ್ಥಳದಲ್ಲಿ ಜೆಸಿಬಿ ಬಳಸಿ ಮಣ್ಣು ತೆರವು ಮಾಡಿದ್ದರೂ ಮೃತದೇಹ ಸಿಕ್ಕಿರಲಿಲ್ಲ. ಹೀಗಾಗಿ, ಅಡಿಕೆ ಹಾಳೆ ಹಾಗೂ ಹುಲ್ಲಿನಿಂದ ಪ್ರತಿಕೃತಿ ತಯಾರಿಸಿ, ಅದಕ್ಕೆ ಸೀರೆ ತೊಡಿಸಿ ಭೂಕುಸಿತದ ಸ್ಥಳದಲ್ಲಿ ಪೂಜೆ ಸಲ್ಲಿಸಲಾಯಿತು. ಬಳಿಕ ಪ್ರತಿಕೃತಿಯನ್ನು ಅಂತ್ಯ ಸಂಸ್ಕಾರ ನಡೆಸಿ, ಆತ್ಮಕ್ಕೆ ಶಾಂತಿ ಕೋರಲಾಯಿತು. ಅಲ್ಲಿ ನೆರೆದಿದ್ದ ಆಕೆಯ ಸಹಪಾಠಿಗಳು, ಶಿಕ್ಷಕರು, ಕುಟುಂಬಸ್ಥರು, ಗ್ರಾಮಸ್ಥರಲ್ಲಿ ಕಣ್ಣೀರು ತರಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !