ವಿಐಪಿಗಳಿರಲಿ ಅಂಬುಲೆನ್ಸ್‌ ಹೋಗಲಿ: ಡಿಸಿಎಂ ಜಿ.ಪರಮೇಶ್ವರ

7

ವಿಐಪಿಗಳಿರಲಿ ಅಂಬುಲೆನ್ಸ್‌ ಹೋಗಲಿ: ಡಿಸಿಎಂ ಜಿ.ಪರಮೇಶ್ವರ

Published:
Updated:

ಬೆಂಗಳೂರು: ಶಿಷ್ಠಾಚಾರದಂತೆ ಗಣ್ಯವ್ಯಕ್ತಿಗಳ ವಾಹನಗಳಿಗೆ ದಟ್ಟಣೆಮುಕ್ತ ಮಾರ್ಗಕ್ಕೆ ಅನುವು ಮಾಡಿಕೊಡುವಾಗ ಅಂಬುಲೆನ್ಸ್‌ಗಳ ಸಂಚಾರಕ್ಕೆ ತಡೆಯಾಗದಂತೆ ಅಗತ್ಯ ಕ್ರಮ ವಹಿಸುವಂತೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಪೊಲೀಸ್‌ ಇಲಾಖೆಗೆ ಸೂಚಿಸಿದ್ದಾರೆ. 

‘ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಸಂಚರಿಸುವ ಮಾರ್ಗಗಳಲ್ಲಿ ನನಗೆ ಟ್ರಾಫಿಕ್‌ ಫ್ರೀ ಸಂಚಾರ ಮಾಡುವ ಸಲುವಾಗಿ ಕೆಲವು ಬಾರಿ ಅಂಬುಲೆನ್ಸ್‌ಗಳನ್ನು ತಡೆದು ನಿಲ್ಲಿಸಿದ್ದನ್ನು ಗಮನಿಸಿದ್ದೇನೆ’

‘ನನಗೆ ಮತ್ತು ಇನ್ನಿತರ ವಿಐಪಿಗಳಿಗೆ ನೀಡಿರುವ ಶಿಷ್ಠಾಚಾರವನ್ನು ಬದಿಗೊತ್ತಿ, ಅಂಬುಲೆನ್ಸ್‌ಗಳು ಯಾವುದೇ ರೀತಿಯ ತೊಂದರೆಯಾಗದಂತೆ ಸಂಚರಿಸಲು ಕ್ರಮ ಕೈಗೊಳ್ಳಿ’ ಎಂದು ಡಿಸಿಎಂ, ಪೊಲೀಸ್‌ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. 

ಬರಹ ಇಷ್ಟವಾಯಿತೆ?

 • 11

  Happy
 • 1

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !