ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಲಕ್ಕೆ ಚಿನ್ನದ ಕಿವಿಯೋಲೆ

Last Updated 15 ಜನವರಿ 2019, 20:00 IST
ಅಕ್ಷರ ಗಾತ್ರ

ಬೇಲೂರು: ಇಲ್ಲಿನ ಚನ್ನಕೇಶವ ದೇಗುಲದಲ್ಲಿ ಸಂಕ್ರಾಂತಿಯಂದು ನಡೆಯುವ ಕುದುರೆ ಉತ್ಸವ ಅಥವಾ ದೇವರ ಕಾಡು ಬೇಟೆ ಉತ್ಸವ ಮಂಗಳವಾರ ಸಂಜೆ ವಿಜೃಂಭಣೆಯಿಂದ ಜರುಗಿತು.

ಸಂಪ್ರದಾಯದಂತೆ ದೊಡ್ಡಬ್ಯಾಡಿಗೆರೆ ಗ್ರಾಮಸ್ಥರು ಹಿಡಿದು ತಂದಿದ್ದ ಕಾಡು ಮೊಲದ ಕಿವಿಗೆ ಮುರು ಎಂಬ ಚಿನ್ನದ ಕಿವಿಯೋಲೆಯನ್ನು ಅರ್ಚಕರು ತೊಡಿಸಿ ದೇವರಿಗೆ ಸಮರ್ಪಿಸಿ, ಗಣ್ಯರಿಗೆ ಮುಟ್ಟಿಸಿದರು. ಬಳಿಕ ದೊಡ್ಡ ಬ್ಯಾಡಿಗೆರೆ ಗ್ರಾಮದ ಪ್ರಮುಖರಿಗೆ ಮೊಲ ಹಿಂತಿರುಗಿಸಲಾಯಿತು. ನಂತರ ಮೊಲವನ್ನು ಮರಳಿ ಕಾಡಿಗೆ ಬಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT