ಶಿಕ್ಷಣ ಹಕ್ಕು ಕಾಯ್ದೆ ಬದಲಾವಣೆಗೆ ಚಿಂತನೆ– ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ

7
ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ

ಶಿಕ್ಷಣ ಹಕ್ಕು ಕಾಯ್ದೆ ಬದಲಾವಣೆಗೆ ಚಿಂತನೆ– ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ

Published:
Updated:
Deccan Herald

ಧಾರವಾಡ: ‘ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅನ್ವಯ ಖಾಸಗಿ ಶಾಲೆಗಳಿಗೆ ಹಣ ನೀಡುವ ಪದ್ಧತಿಗೆ ತಿದ್ದುಪಡಿ ತರುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ’ ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ ಹೇಳಿದರು.

ಅಂತರರಾಷ್ಟ್ರೀಯ ಶಿಕ್ಷಕದ ದಿನಾಚರಣೆ ಅಂಗವಾಗಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಕರ್ನಾಟಕ ರಾಜ್ಯ ಶಿಕ್ಷಣ, ಸಂಶೋಧನೆ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ, ಭಾರತೀಯ ರಾಷ್ಟ್ರೀಯ ಕಾನೂನು ಶಾಲೆ ವಿಶ್ವವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ‘ಸಾರ್ವಜನಿಕ ಶಿಕ್ಷಣ ತಕ್ಷಣದ ಸುಧಾರಣೆಗೆ ಸಹಾಯವಾಗಬಹುದಾದ ಸರ್ಕಾರಿ ಶಾಳೆಗಳ ಸಬಲೀಕರಣ ಸಮಿತಿ ವರದಿಯ ಆಯ್ದ ಶಿಫಾರಸುಗಳ ಬಗ್ಗೆ ಒಂದು ಅವಲೋಕನ’ ಉದ್ಘಾಟಿಸಿ ಅವರು ಮಾತನಾಡಿದರು.

‘ಆರ್‌ಟಿಇ ಸಮರ್ಪಕ ಜಾರಿಗೆ ಶಿಕ್ಷಣ ತಜ್ಞರು ನಿರಂತರ ಒತ್ತಡ ತಂದ ಪರಿಣಾಮ ಸರ್ಕಾರ ಇಂಥದ್ದೊಂದು ಚಿಂತನೆಯನ್ನು ಮಾಡುತ್ತಿದೆ’ ಎಂದರು.

ಇದಕ್ಕೂ ಪೂರ್ವದಲ್ಲಿ ಮಾತನಾಡಿದ ಪ್ರಾಧ್ಯಾಪಕ ಡಾ. ನಿರಂಜನ ಆರಾಧ್ಯ, ‘ಶಿಕ್ಷಣ ಹಕ್ಕು ಕಾಯ್ದೆಯಲ್ಲಿ ಹಲವು ಅಂಶಗಳಿದ್ದರೂ ರಾಜ್ಯ ಸರ್ಕಾರ 12(1)(ಸಿ) ಒಂದನ್ನು ಮಾತ್ರ ಅಳವಡಿಸಿಕೊಂಡಿದೆ. ಈ ಕಾಯ್ದೆ ಅನ್ವಯ ಖಾಸಗಿ ಶಾಲೆಗಳಿಗೆ ರಾಜ್ಯ ಸರ್ಕಾರ ಮಧ್ಯವರ್ತಿಯಂತೆ ವಿದ್ಯಾರ್ಥಿಗಳನ್ನು ದಾಖಲಿಸುತ್ತಿದೆ. ಜತೆಗೆ ಪ್ರತಿ ವಿದ್ಯಾರ್ಥಿಗೆ ವಾರ್ಷಿಕ ₹19ಸಾವಿರದಂತೆ ಖಾಸಗಿ ಶಾಲೆಗಳಿಗೆ ಶುಲ್ಕ ನೀಡುತ್ತಿದೆ. ಹೀಗಾಗಿ ಕಳೆದ ವರ್ಷ ₹1156ಕೋಟಿ ಹಣವನ್ನು ವ್ಯಯಿಸಿದೆ. ಕಾಯ್ದೆಯಲ್ಲಿ ಹೀಗೆ ಶುಲ್ಕ ಪಾವತಿಸುವ ಕುರಿತು ಎಲ್ಲಿಯೂ ಉಲ್ಲೇಖವಿಲ್ಲ’ ಎಂದರು.

‘ರಾಜ್ಯ ಸರ್ಕಾರ ಅಳವಡಿಸಿಕೊಂಡಿರುವ ಈ ಪದ್ಧತಿಯಿಂದಾಗಿ ಸರ್ಕಾರಿ ಶಾಲೆಗಳು ಅವಸಾನದ ಹಂತಕ್ಕೆ ತಲುಪಿದೆ. ಸಮೀಪದ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಬೇಕಾದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಏಜೆಂಟರಂತೆ ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಹೀಗಾಗಿ ಇದೊಂದು ಸರ್ಕಾರಿ ಪ್ರಾಯೋಜಕತ್ವದ ಖಾಸಗೀಕರಣವಾಗಿದೆ’ ಎಂದು ಆರೋಪ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !