ಇಂಗ್ಲಿಷ್‌ ತೊಡಕು: ವಿಡಿಯೊ ಸಂವಾದ ತಪ್ಪಿಸಿದ ಜಿ.ಟಿ.ದೇವೇಗೌಡ

7

ಇಂಗ್ಲಿಷ್‌ ತೊಡಕು: ವಿಡಿಯೊ ಸಂವಾದ ತಪ್ಪಿಸಿದ ಜಿ.ಟಿ.ದೇವೇಗೌಡ

Published:
Updated:
Deccan Herald

ಬೆಂಗಳೂರು: ಇಂಗ್ಲಿಷ್‌ನಲ್ಲಿ ಸಂವಾದ ನಡೆಸಲು ಬರುವುದಿಲ್ಲ ಎಂಬ ಕಾರಣಕ್ಕೆ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಶುಕ್ರವಾರ ಕೇಂದ್ರ ಮಾನವ ಸಂಪನ್ಮೂಲ ಸಚಿವರ ಜತೆಗಿನ ವಿಡಿಯೊ ಸಂವಾದ  ಕಾರ್ಯಕ್ರಮಕ್ಕೆ ಹಾಜರಾಗಲಿಲ್ಲ.

ವಿಡಿಯೊ ಸಂವಾದದಲ್ಲಿ ಭಾಗವಹಿಸುವ ಮಾಹಿತಿಯನ್ನು ಎಲ್ಲ ಮಾಧ್ಯಮಗಳಿಗೂ ಉನ್ನತ ಶಿಕ್ಷಣ ಸಚಿವರ ಕಚೇರಿಯಿಂದ ಕಳುಹಿಸಲಾಗಿತ್ತು. ವಿಕಾಸಸೌಧದ ಕೊಠಡಿ ಸಂಖ್ಯೆ 118 ರಲ್ಲಿ ವಿಡಿಯೊ ಸಂವಾದಕ್ಕೆ ಸಚಿವರು ಭಾಗವಹಿಸಬೇಕಿತ್ತು. ಸಚಿವರು ಭಾಗವಹಿಸುವುದಿಲ್ಲ ಎಂಬ ಕಾರಣಕ್ಕೆ ಅಲ್ಲಿ ಕಾರ್ಯಕ್ರಮ ರದ್ದು ಪಡಿಸಲಾಯಿತು. 

ಕರ್ನಾಟಕವೂ ಸೇರಿ 10 ಪ್ರಮುಖ ರಾಜ್ಯಗಳ ಉನ್ನತ ಶಿಕ್ಷಣ ಸಚಿವರೊಂದಿಗೆ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ವಿಡಿಯೊ ಸಂವಾದ ನಿಗದಿ ಆಗಿತ್ತು. ಈ ಸಭೆಯಲ್ಲಿ ಅಕ್ಟೋಬರ್‌ 2 ಕ್ಕೆ ನಡೆಯಲಿರುವ ಮಹಾತ್ಮಗಾಂಧಿಯವರ 150 ನೇ ಜನ್ಮ ದಿನಾಚರಣೆ ಮತ್ತು ಉನ್ನತ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಹಲವು ವಿಷಯಗಳ ಬಗ್ಗೆ ಚರ್ಚೆ ನಿಗದಿಯಾಗಿತ್ತು.

ಆರಂಭದಲ್ಲಿ ಸಚಿವ ಜಿ.ಟಿ.ದೇವೇಗೌಡ ವಿಡಿಯೊ ಸಂವಾದದಲ್ಲಿ ಭಾಗವಹಿಸಲು ಒಪ್ಪಿದ್ದರು. ಆದರೆ, ಸಚಿವರ ನಿಕಟವರ್ತಿಯೊಬ್ಬರು ಇಂಗ್ಲಿಷ್‌ ಸಮಸ್ಯೆ ಇರು ವುದರಿಂದ ಭಾಗವಹಿಸುವುದು ಬೇಡ ಎಂದು ಸಲಹೆ ನೀಡಿದರು. ಆ ಬಳಿಕ ತಮ್ಮ ನಿರ್ಧಾರವನ್ನು ಬದಲಾಯಿಸಿದರು ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !