ಭಾನುವಾರ, ಆಗಸ್ಟ್ 25, 2019
21 °C

ಫೋನುಗಳೆಲ್ಲ ಸ್ವಿಚ್ಡ್‌ ಆಫ್!

Published:
Updated:

ಹಾಸನ: ಜಿಲ್ಲೆಯಲ್ಲಿ ‘ಗೌಡಾ’ ಪಡೆದವರ ಪೈಕಿ ರಿಯಲ್‌ ಎಸ್ಟೇಟ್‌ ಉದ್ಯಮಿ, ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು ಹಾಗೂ ಸ್ವಾಮೀಜಿ ಸಹ ಇದ್ದಾರೆ.

ಏಜೆಂಟರಿಗೆ ₹50 ಸಾವಿರದಿಂದ ₹1 ಲಕ್ಷ ನೀಡಿದರೆ, ಪದವಿ ಸ್ವೀಕರಿಸುವಂತೆ ಸಂಬಂಧಪಟ್ಟ ವಿ.ವಿಯಿಂದ ಮನೆಗೇ ಪತ್ರ ಬರುತ್ತದೆ. ಹೈನುಗಾರಿಕೆ ಜತೆಗೆ ರಿಯಲ್‌ ಎಸ್ಟೇಟ್‌ ಉದ್ಯಮ ನಡೆಸುತ್ತಿರುವ ಕೊಣನೂರಿನ ವ್ಯಕ್ತಿಯೊಬ್ಬರಿಗೆ, ಸಾಮಾಜಿಕ ಸೇವೆ ಪರಿಗಣಿಸಿ ಗೌರವ ಡಾಕ್ಟರೇಟ್ ನೀಡಲಾಗಿದೆ.

‘ಗೌಡಾ’ ಕುರಿತು ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾಗುತ್ತಿದ್ದಂತೆಯೇ, ಬಹುತೇಕರು ತಮ್ಮ ಮೊಬೈಲ್‌ ಸ್ವಿಚ್ಡ್ ಆಫ್‌ ಮಾಡಿಕೊಂಡಿದ್ದಾರೆ.

 

Post Comments (+)