ನಿರಾಶ್ರಿತರಿಗೆ ಬಿಸ್ಕೆಟ್ ಎಸೆದ ಎಚ್.ಡಿ. ರೇವಣ್ಣ; ವೈರಲ್ ವಿಡಿಯೊ

7

ನಿರಾಶ್ರಿತರಿಗೆ ಬಿಸ್ಕೆಟ್ ಎಸೆದ ಎಚ್.ಡಿ. ರೇವಣ್ಣ; ವೈರಲ್ ವಿಡಿಯೊ

Published:
Updated:

ಹಾಸನ: ಲೋಕೋಪಯೋಗಿ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ. ರೇವಣ್ಣ ಶನಿವಾರ ಹಾಸನದ ರಾಮನಾಥಪುರದ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿದ್ದರು. ಈ ವೇಳೆ ನಿರಾಶ್ರಿತರ ಸಮಸ್ಯೆ ಕೇಳುವ ಮುನ್ನವೇ ಬಿಸ್ಕೆಟ್‍ನ್ನು ಆ ಜನರತ್ತ ಎಸೆಯುತ್ತಿರುವ ವಿಡಿಯೊ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಸಚಿವರು ತಮ್ಮ ಕಷ್ಟಗಳನ್ನು ಆಲಿಸಲು ಬಂದಿದ್ದಾರೆ ಎಂದು ಅಲ್ಲಿದ್ದ ನಿರಾಶ್ರಿತರು ಗುಂಪಾಗಿ ಮುತ್ತಿಕೊಂಡಿದ್ದರು. ಆ ಹೊತ್ತಿಗೆ ರೇವಣ್ಣ ತಾವು ತಂದಿದ್ದ ಬಿಸ್ಕೆಟ್ ಪ್ಯಾಕ್ ಬಿಚ್ಚಿ ಒಂದೊಂದೇ ಬಿಸ್ಕೆಟ್‍ನ್ನು ಅವರತ್ತ ಎಸೆದಿದ್ದಾರೆ. ಈ ದೃಶ್ಯಗಳು ಸುದ್ದಿವಾಹಿನಿಯಲ್ಲಿ ಪ್ರಸಾರವಾಗಿತ್ತು.

ಇದೇ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಆಗಿದ್ದು, ಜನರಿಂದ ಆಕ್ರೋಶ ವ್ಯಕ್ತವಾಗಿದೆ.

ಬರಹ ಇಷ್ಟವಾಯಿತೆ?

 • 15

  Happy
 • 3

  Amused
 • 1

  Sad
 • 3

  Frustrated
 • 23

  Angry

Comments:

0 comments

Write the first review for this !