ಮಾಂಸ ತಿಂದು ದೇವರ ದರ್ಶನ ಮಾಡಿದ್ದಕ್ಕೆ ಅಧಿಕಾರ ಕಳೆದುಕೊಂಡರು: ಬಸನಗೌಡ ಪಾಟೀಲ

7
ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲ್ಲ ಎಂದ ವಿಜಯಪುರ ಶಾಸಕ

ಮಾಂಸ ತಿಂದು ದೇವರ ದರ್ಶನ ಮಾಡಿದ್ದಕ್ಕೆ ಅಧಿಕಾರ ಕಳೆದುಕೊಂಡರು: ಬಸನಗೌಡ ಪಾಟೀಲ

Published:
Updated:

ವಿಜಯಪುರ: ‘ಮಾಂಸ ತಿಂದು ಧರ್ಮಸ್ಥಳದ ಮಂಜುನಾಥನ ದರ್ಶನ ಪಡೆದಿದ್ದರಿಂದಲೇ, ಸಿದ್ದರಾಮಯ್ಯ ಅಧಿಕಾರ ಕಳೆದುಕೊಂಡರು’ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

‘ರಾಹುಲ್‌ಗಾಂಧಿ ಇದೀಗ ಚಿಕನ್‌ ಸೂಪ್‌ ಕುಡಿದು ಮಾನಸ ಸರೋವರ ಯಾತ್ರೆ ನಡೆಸಿದ್ದಾರೆ. ಇದರಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗರು ಯಾವ ಕಾರಣಕ್ಕೂ ಅಧಿಕಾರಕ್ಕೆ ಬರಲ್ಲ’ ಎಂದು ಬುಧವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಮಾಂಸ ತಿನ್ನದೇ ಮಂಜುನಾಥನ ದರ್ಶನ ಮಾಡಿದ್ದರೆ, ಸಿದ್ದರಾಮಯ್ಯ ಅಧಿಕಾರದಲ್ಲಿ ಉಳಿಯುತ್ತಿದ್ದರೆ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯತ್ನಾಳ, ‘ಯಾವುದನ್ನು ಮಾಡಿದರೂ ಶ್ರದ್ಧೆಯಿಂದ ಮಾಡಲಿ. ನಾಟಕೀಯವಾಗಿ ಮಾಡಬಾರದು’ ಎಂದರು.

‘ಎಡಪಂಥೀಯ ವಿಚಾರಧಾರೆ ಹೊಂದಿರುವ ಕೆಲವರ ಹತ್ಯೆಯಾದಾಗ, ಬೆಂಗಳೂರಿನ ಪುಟ್ಟಣ್ಣಚೆಟ್ಟಿ ಸಭಾಭವನದ ಮುಂಭಾಗ ಜಮಾಯಿಸಿ ಪ್ರತಿಭಟಿಸುವ ಪ್ರಗತಿಪರರು, ಬುದ್ಧಿಜೀವಿಗಳು ಹಿಂದೂ ಕಾರ್ಯಕರ್ತರ ಹತ್ಯೆಯಾದಾಗ ಏಕೆ ಹೋರಾಟ ನಡೆಸಲ್ಲ’ ಎಂದು ಗೌರಿ ಡೇ ಆಚರಣೆಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಯೊಂದಕ್ಕೆ ಯತ್ನಾಳ ಪ್ರತಿಕ್ರಿಯಿಸಿದರು.

‘ರಾಜೀವ್‌ಗಾಂಧಿ ಕೊಂದವರು ಮಾತ್ರ ದೇಶದ್ರೋಹಿಗಳು. ಮೋದಿ ಹತ್ಯೆಗೆ ಸಂಚು ನಡೆದರೂ, ವಿರೋಧ ಪಕ್ಷದ ಯಾರೊಬ್ಬರಲ್ಲೂ ಈ ಬಗ್ಗೆ ಆತಂಕವಿಲ್ಲ. ಪ್ರಧಾನಮಂತ್ರಿ ಹುದ್ದೆ ಯಾವಾಗಲೂ ಒಂದೇ ಸ್ಥಾನಮಾನ ಹೊಂದಿರುತ್ತದೆ. ರಫೆಲ್‌ ಒಪ್ಪಂದದ ಬಗ್ಗೆ ರಾಹುಲ್‌ಗಾಂಧಿಗೆ ನಿಖರ ಮಾಹಿತಿಯಿಲ್ಲ’ ಎಂದು ಬಸನಗೌಡ ಹೇಳಿದರು.

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 0

  Sad
 • 1

  Frustrated
 • 11

  Angry

Comments:

0 comments

Write the first review for this !