ಹೈರಾಣಾದ ಪ್ರಯಾಣಿಕರಿಂದ ಆಕ್ರೋಶ

7
ಚಾರ್ಮಾಡಿ: ಸಿ.ಎಂ ಸಂಚಾರಕ್ಕಾಗಿ ಹೆದ್ದಾರಿಯಲ್ಲಿ ವಾಹನಗಳಿಗೆ ತಡೆ

ಹೈರಾಣಾದ ಪ್ರಯಾಣಿಕರಿಂದ ಆಕ್ರೋಶ

Published:
Updated:
Deccan Herald

ಚಿಕ್ಕಮಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಚಾರ್ಮಾಡಿ ಘಾಟಿ ಮೂಲಕ ಹಾದು ಹೋಗುತ್ತಾರೆ ಎಂಬ ಕಾರಣಕ್ಕಾಗಿ ಪೊಲೀಸರು ಮಂಗಳವಾರ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ಸುಮಾರು ಎರಡೂವರೆ ತಾಸಿಗೂ ಅಧಿಕ ಕಾಲ ತಡೆದು ನಿಲ್ಲಿಸಿದ್ದು ಆಕ್ರೋಶಕ್ಕೆ ಕಾರಣವಾಯಿತು.

ಮಧ್ಯಾಹ್ನ 3.30ಕ್ಕೆ ಮಳೆಯ ನಡುವೆಯೇ ಕೊಡೆ ಹಿಡಿದು ಕಾರ್ಯಾಚರಣೆಗೆ ಇಳಿದ ಪೊಲೀಸರು, ಹೆದ್ದಾರಿಯಲ್ಲಿ ಸಾಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ತಾಲ್ಲೂಕಿನ ಬಿದರಹಳ್ಳಿಯಲ್ಲಿರುವ ಕೆ.ಎಸ್‌.ಆರ್‌.ಟಿ.ಸಿ ಘಟಕದ ಬಳಿ ನಿಲುಗಡೆಗೊಳಿಸಿದರು.

ಖಾಸಗಿ ವಾಹನಗಳನ್ನು ಕೊಟ್ಟಿಗೆಹಾರ, ಬಣಕಲ್‌, ಮುಗ್ರಹಳ್ಳಿ ಗಳಲ್ಲಿ ತಡೆದು ಶೂನ್ಯ ಸಂಚಾರ ಕಲ್ಪಿಸಲಾಗಿತ್ತು. ಕೊಟ್ಟಿಗೆಹಾರದಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದರಿಂದ ಖಾಸಗಿ ವಾಹನಗಳನ್ನು ಕೆ.ಎಸ್‌.ಆರ್‌.ಟಿ.ಸಿ ಬಸ್‌ ನಿಲ್ದಾಣದೊಳಗೆ ನಿಲ್ಲಿಸಲಾಗಿತ್ತು. ಆದರೆ, ಸಂಜೆ 6.45ರ ಸುಮಾರಿಗೆ ಮುಖ್ಯಮಂತ್ರಿ ಮತ್ತು ಅವರ ಕುಟುಂಬದ ಸದಸ್ಯರಿದ್ದ ವಾಹನಗಳು ಚಾರ್ಮಾಡಿ ಘಾಟಿ ಮಾರ್ಗವಾಗಿ ಬೆಂಗಳೂರಿನತ್ತ ಸಾಗಿದವು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 5

  Angry

Comments:

0 comments

Write the first review for this !