ಚಿಕ್ಕಮಗಳೂರು: ಭಾರಿ ಮಳೆಯಿಂದ ಗದ್ದೆ, ತೋಟ ಜಲಾವೃತ, ಕುಸಿದ ಶಾಲಾ ಕೊಠಡಿ

7

ಚಿಕ್ಕಮಗಳೂರು: ಭಾರಿ ಮಳೆಯಿಂದ ಗದ್ದೆ, ತೋಟ ಜಲಾವೃತ, ಕುಸಿದ ಶಾಲಾ ಕೊಠಡಿ

Published:
Updated:

ಚಿಕ್ಕಮಗಳೂರು: ವರುಣನ ಆರ್ಭಟಕ್ಕ ಜಿಲ್ಲೆಯ ಮಲೆನಾಡು ಭಾಗ ತತ್ತರಿಸಿದೆ. ಶೃಂಗೇರಿ ತಾಲ್ಲೂಕಿನ ನೆಮ್ಮಾರ್, ಕೆರೆಕಟ್ಟೆ, ಕುರಬಕೇರಿ, ಭಾರತೀತೀರ್ಥ ರಸ್ತೆ, ಭಾರತಿ ಬೀದಿ, ಆನೆಗುಂದ ರಸ್ತೆ, ಗಾಂಧಿ ಮೈದಾನ, ಹಾಲಂದೂರು ರಸ್ತೆ, ಕೆರೆಕಟ್ಟೆಯ ಗುಲುಗುಂಜಿ ಮನೆ ನೀರಿನಿಂದ ಆವೃತವಾಗಿದೆ. ಕೊಪ್ಪ–ಶಿವಮೊಗ್ಗ ರಸ್ತೆ, ತೆಕ್ಕೂರು ಮಾರ್ಗದ  ಕಲ್ಕಟ್ಟೆ ರಸ್ತೆಯಲ್ಲಿ ಸಂಚಾರಕ್ಕೆ ತೊಂದರೆಯಾಗಿದೆ. 

ಮಂಗಳೂರಿನಿಂದ ಶಿವಮೊಗ್ಗ, ದಾವಣಗೆರೆಗೆ ಸಂಚರಿಸುತ್ತಿದ್ದ ಅನುಗ್ರಹ ಬಸ್ ನೆಮ್ಮಾರ್ ಕುರದಮನೆ ಸಮೀಪ ಸೋಮವಾರ ತಡರಾತ್ರಿ ಚರಂಡಿಗೆ ಇಳಿದಿದೆ. ಬಸ್ಸಿನಲ್ಲಿದ್ದ 32 ಪ್ರಯಾಣಿಕರು ಪಾರಾಗಿದ್ದು, ಮತ್ತೊಂದು ಬಸ್‌ ವ್ಯವಸ್ಥೆ ಮಾಡಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲಾಯಿತು.

ಬಾಳೆಹೊನ್ನೂರು ಭಾಗದಲ್ಲಿ ಮಳೆಯಿಂದಾಗಿ ರಸ್ತೆ ಜಲಾವೃತವಾಗಿದ್ದು, ಎಲೆಕಲ್ ಬಳಿಯಿಂದ ಅಂಡಮನೆ ಗ್ರಾಮಕ್ಕೆ ತೆಪ್ಪದಲ್ಲಿ ತೆರಳಿದರು.

ಶಾಲೆ ಕೊಠಡಿ ಕುಸಿತ
ಮೂಡಿಗೆರೆ ತಾಲ್ಲೂಕಿನ ಜನ್ನಾಪುರ ಗ್ರಾಮದ ಚಿನ್ನಿಗಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಸಂಪೂರ್ಣ ಕುಸಿದಿದೆ. 

7ನೇ ತರಗತಿ ವಿದ್ಯಾರ್ಥಿಗಳಿಗೆ ಇದೇ ಕೊಠಡಿಯಲ್ಲಿ ತರಗತಿ ನಡೆಸಲಾಗುತ್ತಿತ್ತು. ಭಾರಿ ಮಳೆಯ ಕಾರಣ ಮಂಗಳವಾರ ಶಾಲೆಗೆ ರಜೆ ಘೋಷಿಸಲಾಗಿತ್ತು. ಇದರಿಂದ ಅದೃಷ್ಟವಶಾತ್ ಭಾರೀ ದುರಂತ ತಪ್ಪಿದಂತಾಗಿದೆ ಎಂದು ಹಳೆ ವಿದ್ಯಾರ್ಥಿ ಜಯಪಾಲ್ ತಿಳಿಸಿದರು.

ಮಳೆಯಿಂದ ಹೆಸ್ಗಲ್ ರಸ್ತೆಯಲ್ಲಿ ಭೂಕುಸಿತ ಉಂಟಾಗಿದ್ದು, ವಿದ್ಯುತ್ ಕಂಬಗಳು ಧರೆಗುರುಳಿರುವುದರಿಂದ ಸೋಮವಾರ ರಾತ್ರಿಯಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ.

ತಾಲ್ಲೂಕು ಆಡಳಿತ ಮತ್ತು ಶಾರದ ಮಠದ ವತಿಯಿಂದ ಜಿಎಸ್‌ಬಿ ಸಭಾಭವನದಲ್ಲಿ ಗಂಜಿ ಕೇಂದ್ರ ತೆರೆಯಾಲಾಗಿದೆ.   

 ತುಂಗಾನದಿ ಪ್ರವಾಹದಿಂದ ಶಾರದಾ ಪೀಠದ ಸ್ನಾನ ಘಟ್ಟ ಹಾಗೂ ಸಂಧ್ಯಾವಂದನೆ ಮಂಟಪ ಹಾಗೂ ಕಪ್ಪೆ ಶಂಕರ ದೇವಾಲಯ ಮುಳುಗಿದೆ. ಶೃಂಗೇರಿ ಶಾರದ ಮಠದ ಪಕ್ಕದದ ಗಾಂಧಿಮೈದಾನ ಜಲಾವೃತವಾಗಿದೆ. ಈ ಪ್ರದೇಶದ ವರ್ತಕರನ್ನು ಸುರಕ್ಷಿತ ಸ್ಥಳಕ್ಕೆ ಕಳಿಸಲಾಗಿದೆ. ಪರ್ಯಾಯ ಮಾರ್ಗದಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಪಟ್ಟಣದ ಕುರುಬಕೇರಿ ರಸ್ತೆಗಳ ಎರಡು ಕಡೆಯಿಂದ ನೀರು ನುಗ್ಗಿದೆ.

ನೆಮ್ಮಾರ್ ರಸ್ತೆಯಲ್ಲಿ ಎರಡು ಕಡೆ ಉರುಳಿದ್ದ ಮರಗಳನ್ನು ಅರಣ್ಯ ಸಿಬ್ಬಂದಿ ತೆರುವುಗೊಳಿಸಿದರು. ಮೆಣಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೌಳಿ ಮತ್ತು ಹೆಗ್ಗಾರು ರಸ್ತೆಗೆ ಉರುಳಿದ್ದ ಮರವನ್ನು ತೆರವುಗೊಳಿಸಲಾಗಿದೆ. 

ಕುಂತೂರು ಗ್ರಾಮದ ದೊಡ್ಡಹೋನ್ನೆ ಮೇಘಶ್ಯಾಮ್  ಭಟ್‍ರವರ ವಾಸದ ಮನೆಯ ಪಕ್ಕ ಧರೆ ಕುಸಿದಿದೆ. ಹಾಲಂದೂರಿನಲ್ಲಿ  ಸೀನಪ್ಪ ಅವರ ಮನೆಯ ಚಾವಣಿ ಕುಸಿದಿದೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !