ಬುಧವಾರ, ಜನವರಿ 22, 2020
19 °C

ವಿಡಿಯೊ: ಸಿದ್ದರಾಮಯ್ಯಗೆ 'ಹೌದು ಹುಲಿಯಾ' ಡೈಲಾಗ್‌ ಹೊಡೆದಿದ್ದ ಹುಲಿಯಾ ಸಿಕ್ಕ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಕಾಗವಾಡದಲ್ಲಿ ಉಪಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ಹೌದು ಹುಲಿಯಾ ಎಂದು ಡೈಲಾಗ್‌ ಹೊಡೆದಿದ್ದರು. 

ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಹೌದು ಹುಲಿಯಾ ಎಂದು ಹೇಳಿದ್ದ ವ್ಯಕ್ತಿಯನ್ನು ವಿಡಿಯೊದಲ್ಲಿ ನೋಡಬಹುದಾಗಿದೆ. ಈ ಡೈಲಾಗ್‌ ಹೊಡೆದಿದ್ದ ವ್ಯಕ್ತಿಯ ಹುಡುಕಾಟಕ್ಕೆ ನೆಟ್ಟಿಗರು ಗೂಗಲ್‌ ಮೊರೆ ಹೋಗಿದ್ದರು.

ಸಿದ್ದರಾಮಯ್ಯ ಅವರು, ‘ಇಂದಿರಾಗಾಂಧಿ ದೇಶಕ್ಕೋಸ್ಕರ ಪ್ರಾಣ ತೆತ್ತರು’ ಎನ್ನುತ್ತಿದ್ದಂತೆಯೇ, ಜನರ ಸಾಲಿನಲ್ಲಿದ್ದ ವ್ಯಕ್ತಿಯೊಬ್ಬ ‘ಹೌದು ಹುಲಿಯ’ ಎಂದಿದ್ದರು.

‘ಯಾರಯ್ಯಾ ಅಂವ ಹೇ ಕಳುಸ್ರೀ ಅವ್ನ ಆಚೆಗೆ. ಸುಮ್ನೆ ಕುತ್ಕಬೇಕು. ಇನ್ನೊಂದ್ಸಾರಿ ಮಾತಾಡುದ್ರೆ ಕಳಿಸ್ಬಿಡ್ತಿನಿ ಆಚೆಗೆ. ಬೆಳಿಗ್ಗೆನೇ ಗುಂಡ್ ಹಾಕ್ಬಿಟ್ಟವ್ನೆ ನೆಡಿಯೊ, ಕಳುಸ್ರೀ ಅವ್ನ ಆಚೆಗೆ’ ಎಂದು ಹೇಳಿದ್ದ ಸಿದ್ದರಾಮಯ್ಯ ಮಾತು ಮುಂದುವರಿಸಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು