ಮಂಗಳವಾರ, ಜನವರಿ 28, 2020
29 °C

ಸಿದ್ದರಾಮಯ್ಯ ಅವರನ್ನು ಭೇಟಿಯಾದ ‘ನಿಜವಾದ ಹುಲಿಯಾ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹೃದಯದ ಚಿಕಿತ್ಸೆಗೆ ಒಳಗಾಗಿ ವಿಶ್ರಾಂತಿ ಪಡೆಯುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ‘ಹೌದೋ ಹುಲಿಯಾ’ ಖ್ಯಾತಿಯ ವ್ಯಕ್ತಿ ಭೇಟಿಯಾಗಿ ಕುಷಲೋಪರಿ ವಿಚಾರಿಸಿದ್ದಾರೆ.

ಇದನ್ನೂ ಓದಿ: ತಿರುಕನ ಕನಸು; ಹೌದು ಹುಲಿಯಾ!

ಇತ್ತೀಚೆಗೆ ಸಿದ್ದರಾಮಯ್ಯ ಅವರು ಕಾಗವಾಡದಲ್ಲಿ ಭಾಷಣ ಮಾಡುತ್ತಿದ್ದ ವೇಳೆ ‘ಹೌದೋ ಹುಲಿಯಾ’ ಎಂದು ಕೂಗಿ ಪೀರಪ್ಪ ಕಟ್ಟೀಮನಿ ಎಂಬುವವರು ಸಾಮಾಜಿಕ ತಾಣದಲ್ಲಿ ಸುದ್ದಿಯಾಗಿದ್ದರು.

ಇದನ್ನೂ ಓದಿ:

ಪೀರಪ್ಪ ಕಟ್ಟೀಮನಿ ಇಂದು ತಮ್ಮನ್ನು ಭೇಟಿಯಾದ ವಿಚಾರವನ್ನು ಸಿದ್ದರಾಮಯ್ಯ ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ: 

‘ಕಾಗವಾಡದಲ್ಲಿ ನನ್ನ ಭಾಷಣದ ವೇಳೆ "ಹೌದೋ ಹುಲಿಯಾ" ಅಂತ‌ ಅವನದ್ದೇ ಶೈಲಿಯಲ್ಲಿ ಪ್ರೀತಿಯಿಂದ ಕೂಗಿದ್ದ ಈ ಪೀರಪ್ಪ ಕಟ್ಟೀಮನಿ. ಅಷ್ಟೇ ಪ್ರೀತಿಯಿಂದ ಇಂದು ನನ್ನ ಆರೋಗ್ಯ ವಿಚಾರಿಸಲು ಬಂದಿದ್ದಾನೆ. ಇಂಥ ನಿಷ್ಕಲ್ಮಶ ಪ್ರೀತಿ ತುಂಬಿದ ಹೃದಯದ ಈತನೇ ನಿಜವಾದ 'ಹುಲಿಯಾ',’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು