ಹುಬ್ಬಳ್ಳಿಯಿಂದ ತಿರುಪತಿಗೆ ವಿಮಾನ ಸಂಚಾರ

7

ಹುಬ್ಬಳ್ಳಿಯಿಂದ ತಿರುಪತಿಗೆ ವಿಮಾನ ಸಂಚಾರ

Published:
Updated:
Prajavani

ಹುಬ್ಬಳ್ಳಿ: ಕೇಂದ್ರ ಸರ್ಕಾರದ ‘ಉಡಾನ್‌’ ಯೋಜನೆಯಡಿ, ಹುಬ್ಬಳ್ಳಿ–ತಿರುಪತಿ ಮತ್ತು ಹುಬ್ಬಳ್ಳಿ–ಬೆಂಗಳೂರು ನಡುವೆ ಜ. 25ರಿಂದ ಪ್ರತಿದಿನ ‘ಸ್ಟಾರ್‌ ಏರ್‌’ ಸಂಸ್ಥೆಯ ವಿಮಾನ ಸಂಚಾರ ಆರಂಭವಾಗಲಿದೆ ಎಂದು ವಿಮಾನ ನಿಲ್ದಾಣದ ನಿರ್ದೇಶಕಿ ಆಹಿಲ್ಯಾ ಕಾಕೋಡ್ಕರ್‌ ತಿಳಿಸಿದರು.

ಬೆಳಿಗ್ಗೆ 7.35ಕ್ಕೆ ಬೆಂಗಳೂರಿನಿಂದ ಹೊರಡುವ ವಿಮಾನವು 8.35ಕ್ಕೆ ಹುಬ್ಬಳ್ಳಿ ತಲುಪಲಿದೆ. ಬೆಳಿಗ್ಗೆ 8.55ಕ್ಕೆ ಅಲ್ಲಿಂದ ಹೊರಟು 10ಕ್ಕೆ ತಿರುಪತಿ ತಲುಪಲಿದೆ. ಬೆಳಿಗ್ಗೆ 10.20ಕ್ಕೆ ತಿರುಪತಿಯಿಂದ ಹೊರಟು 11.25ಕ್ಕೆ ಹುಬ್ಬಳ್ಳಿ ತಲುಪಲಿದೆ. ಬೆಳಿಗ್ಗೆ 11.45ಕ್ಕೆ ಹುಬ್ಬಳ್ಳಿಯಿಂದ ಹೊರಟು ಮಧ್ಯಾಹ್ನ 12.45ಕ್ಕೆ ಬೆಂಗಳೂರಿಗೆ ವಾಪಸ್ಸಾಗಲಿದೆ.

ಹುಬ್ಬಳ್ಳಿ–ತಿರುಪತಿ ಹಾಗೂ ಬೆಂಗಳೂರು–ಹುಬ್ಬಳ್ಳಿ ನಡುವಿನ ಆರಂಭಿಕ ಪ್ರಯಾಣ ದರ ₹ 1,599 ಇದೆ. ಟಿಕೆಟ್‌ ಬುಕಿಂಗ್‌ ಆರಂಭವಾಗಿದೆ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !