ಶುಕ್ರವಾರ, ಫೆಬ್ರವರಿ 26, 2021
19 °C
ಕಾಸರಗೋಡು:

ಕಾಸರಗೋಡಿನ 11 ಮಂದಿ ಐಎಸ್ ತಾಣಕ್ಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಸರಗೋಡು: ಜಿಲ್ಲೆಯ ತ್ರಿಕರಿಪುರ, ಪಡನ್ನ ಪ್ರದೇಶಗಳಿಂದ 17 ಮಂದಿ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ(ಐಎಸ್‌) ತಂಡಕ್ಕೆ ಸೇರಿದ ಎರಡು ವರ್ಷಗಳ ಬಳಿಕ ಕಾಸರಗೋಡಿನಿಂದ ಮತ್ತೆ ಎರಡು ಕುಟುಂಬಗಳ 11 ಮಂದಿ ಕಾಣೆಯಾಗಿದ್ದಾರೆ.

ಕಾಸರಗೋಡು ನಗರ ಸಮೀಪದ ಚಂದ್ರಗಿರಿ ಸೇತುವೆಯ ಬಳಿಯ ಚೆಮ್ನಾಡು ಮುಂಡಾಂಕುಲಂ ಕುನ್ನಿಲ್ ನಿವಾಸಿ ಎಂ.ಅಬ್ದುಲ್ ಹಮೀದ್ ಎಂಬವರು ಈ ಬಗ್ಗೆ ನಗರ ಠಾಣೆಯ ಪೊಲೀಸ
ರಿಗೆ ದೂರು ನೀಡಿದ್ದಾರೆ.  ಮಗಳು ನಸೀರಾ (25), ಆಕೆಯ ಗಂಡ ಮೊಗ್ರಾಲಿನ ಸವಾದ್ (32), ಈ ದಂಪತಿಯ ಮಕ್ಕಳಾದ ಮೂಸಬ್ (5), ಮರ್ಜಾನಾ (3), ಮುಖಬಿಲ್ (1) ಹಾಗೂ ಸವಾದ್‌ನ ಎರಡನೇ ಪತ್ನಿ ಪಾಲಕ್ಕಾಡ್‌ನ ರಹಾನತ್ (25) ಎಂಬುವರು ಜೂನ್ 15ರಿಂದ ಕಾಣೆಯಾಗಿದ್ದು, ಆ ಬಳಿಕ ಸಂಪರ್ಕಿಸಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಕುಟುಂಬದ ಜತೆಯಲ್ಲಿ ನಗರದ ಅಣಂಗೂರು ಕೊಲ್ಲಂಪಾಡಿ ನಿವಾಸಿ ಅನ್ವರ್, ಆತನ ಪತ್ನಿ ಜೀನತ್ ಹಾಗೂ ಅವರ ಮೂವರು ಮಕ್ಕಳು ಕಾಣೆಯಾಗಿದ್ದಾರೆ ಎಂದೂ ಅವರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ಎರಡೂ ಕುಟುಂಬಗಳು ಜತೆಯಾಗಿ ಇವೆ ಎಂದು ಶಂಕಿಸಲಾಗಿದೆ. ಕಾಣೆಯಾದ ಅನ್ವರ್‌ನ ಬಗ್ಗೆ ಸಂಬಂಧಿಕರು ದೂರು ನೀಡದೆ ಇದ್ದರೂ ಈ ಬಗ್ಗೆ ಸಮಗ್ರ ತನಿಖೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ.

ಕಾಣೆಯಾದ ಸವಾದ್‌ಗೆ ದುಬೈನಲ್ಲಿ ಮೊಬೈಲ್ ಹಾಗೂ ಸುಗಂಧ ದ್ರವ್ಯಗಳ ಅಂಗಡಿಗಳಿದ್ದು, ನಿರಂತರವಾಗಿ ಮನೆಯವರೊಡನೆ ಸಂಪರ್ಕದಲ್ಲಿ ಇದ್ದರು. ಇದೇ 15ರ ಬಳಿಕ ಸಂಪರ್ಕ ಕಡಿದು ಹೋಗಿತ್ತು ಎನ್ನಲಾಗಿದೆ.

ಕಾಣೆಯಾದವರು ಐಎಸ್ ಉಗ್ರಗಾಮಿಗಳ ಗುಂಪಿಗೆ ಸೇರಿದ್ದಾರೆಯೇ ಎಂಬ  ಸಂಶಯ ಸ್ಥಳೀಯರಿಗಿದೆ. ಎರಡು ವರ್ಷಗಳ ಹಿಂದೆ ಕಾಸರಗೋಡಿನ ತ್ರಿಕರಿಪುರ ಮತ್ತು ಪಡನ್ನದಿಂದ ಕಾಣೆ
ಯಾದ 17 ಮಂದಿ ಅಫ್ಗಾನಿಸ್ತಾನದ ನಂಗರ್ ಹಾಲ್‌ನಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿಗಳ ಶಿಬಿರಕ್ಕೆ ಸೇರಿಕೊಂಡಿದ್ದರು. ಇವರಲ್ಲಿ ಹಲವರು ಅಮೆರಿಕ ದಾಳಿಯಲ್ಲಿ ಹತರಾಗಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು