ಶುಕ್ರವಾರ, ನವೆಂಬರ್ 22, 2019
23 °C

ಜೆಡಿಎಸ್‌: ಇಂದು ಅಭ್ಯರ್ಥಿಗಳ ಪಟ್ಟಿ ಸಿದ್ಧ?

Published:
Updated:
Prajavani

ಬೆಂಗಳೂರು: ಉಪಚುನಾವಣೆಯಲ್ಲಿ ಎಷ್ಟು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬೇಕು ಎಂಬುದನ್ನು ಭಾನುವಾರದ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ಜೆಡಿಎಸ್‌ ವರಿಷ್ಠ ಎಚ್‌. ಡಿ. ದೇವೇಗೌಡ ಹೇಳಿದ್ದಾರೆ.

‘ಪಕ್ಷದ ಹಿರಿಯ ಮುಖಂಡರ ಸಭೆ ಕರೆದಿದ್ದೇನೆ. ಇಲ್ಲಿ ಚರ್ಚೆ ಮಾಡಿ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡುತ್ತೇನೆ’ ಎಂದು ಅವರು ಶನಿವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘ಚುನಾವಣೆ ಇಷ್ಟು ಬೇಗ ಬರುತ್ತೆ ಅಂತ ನಿರೀಕ್ಷೆ ಮಾಡಿರಲಿಲ್ಲ.‌ ಸೋಲು ಗೆಲುವು ಆಮೇಲಿನದ್ದು. ಕಾಂಗ್ರೆಸ್ ಸಹವಾಸ ಬೇಡ. ಶಿಕ್ಷೆ ಸಾಕಾ ಗಿದೆ ಅಂತ ಕಾರ್ಯಕರ್ತರ ಮಾತಿಗೆ ಬೆಲೆ ನೀಡಿ ಸ್ವತಂತ್ರ ಸ್ಪರ್ಧೆ ಮಾಡುತ್ತೇವೆ’ ಎಂದರು.

ಕೋಡಿಮಠದ ಸ್ವಾಮೀಜಿ ವರ ಭವಿಷ್ಯದ ಬಗ್ಗೆ ಪ್ರತಿಕ್ರಿಯಿಸಿ, ‘ಮಧ್ಯಂತರ ಚುನಾವಣೆ ಬಗ್ಗೆ ಈಗಲೇ ಬಗ್ಗೆ ಈಗಲೇ ಹೇಳಲು ನಾನೇನು ಡಾಕ್ಟರಾ’ ಎಂದು ಪ್ರಶ್ನಿಸಿದರು.

 

ಪ್ರತಿಕ್ರಿಯಿಸಿ (+)