23ಕ್ಕೆ ವೈದ್ಯಕೀಯ ಮಾಪ್‌ಅಪ್‌

7

23ಕ್ಕೆ ವೈದ್ಯಕೀಯ ಮಾಪ್‌ಅಪ್‌

Published:
Updated:

ಬೆಂಗಳೂರು: ಎರಡನೇ ಸುತ್ತಿನ ಸೀಟು ಹಂಚಿಕೆಯ ನಂತರವೂ ಉಳಿದಿರುವ ವೈದ್ಯಕೀಯ ಪದವಿ ಸೀಟುಗಳನ್ನು ಭರ್ತಿ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇದೇ 23 ಮತ್ತು 24ಕ್ಕೆ ಮರುಹಂಚಿಕೆ (ಮಾಪ್‌ಅಪ್‌) ಸುತ್ತಿನ ಕೌನ್ಸೆಲಿಂಗ್‌ ನಡೆಸಲಿದೆ.

ಈ ಸುತ್ತಿನಲ್ಲಿ ಸೀಟು ಪಡೆದ ಅಭ್ಯರ್ಥಿಗಳು ಇದೇ 28ರ ಸಂಜೆ 5ಗಂಟೆಯೊಳಗೆ ಸಂಬಂಧಪಟ್ಟ ಕಾಲೇಜಿಗೆ ದಾಖಲಾಗಬೇಕು ಎಂದು ಪ್ರಾಧಿಕಾರ ಪ್ರಕಟಣೆ ತಿಳಿಸಿದೆ.

ಮೊದಲು ಮತ್ತು ಎರಡನೇ ಸುತ್ತಿನಲ್ಲಿ ಸೀಟು ಪಡೆದವರು ಈ ಮರುಹಂಚಿಕೆ ಸುತ್ತಿನಲ್ಲಿ ಭಾಗವಹಿಸಲು ಅರ್ಹರಾಗಿರುವುದಿಲ್ಲ. ಕೆಇಎ ಮೂಲಕ ದಂತವೈದ್ಯಕೀಯ ಸೀಟು ಹಂಚಿಕೆಯಾದವರು ವೈದ್ಯಕೀಯ ಸೀಟು ಪಡೆಯಬೇಕೆಂದರೆ ಮಾತ್ರ ಈ ಸುತ್ತಿನಲ್ಲಿ ಭಾಗವಹಿಸಬಹುದಾಗಿದೆ.

ಮೊದಲ ಸತ್ತಿನಲ್ಲಿ ಆಯ್ಕೆಗೆ ಅವಕಾಶ ನೀಡಿ, ಎರಡನೇ ಸುತ್ತಿನಲ್ಲಿ ಆಯ್ಕೆ ನೀಡದಿರುವವರು ಇದರಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಸೀಟುಗಳ ಮರುಹಂಚಿಕೆ ಸುತ್ತಿಗೆ ನೋಂದಣಿ ಮಾಡಿಕೊಂಡು ದಾಖಲಾತಿ ಪರಿಶೀಲನೆ ಮುಗಿಸಿಕೊಂಡವರು ಮಾತ್ರ ಇದರಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಪ್ರಾಧಿಕಾರ ಸೂಚನೆಯಲ್ಲಿ ತಿಳಿಸಿದೆ. ಪ್ರಾಧಿಕಾರದ ವೆಬ್‌ಸೈಟ್‌ನಿಂದ ಪ್ರವೇಶ ಪತ್ರವನ್ನು (ಎಂಟ್ರಿ ಪಾಸ್‌) ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಪತ್ರದಲ್ಲಿ ಅಭ್ಯರ್ಥಿಗಳ ಫೋಟೊವನ್ನು ಮುದ್ರಿಸಲಾಗಿರುತ್ತದೆ. ಅಭ್ಯರ್ಥಿಗಳ ಜೊತೆ ಭಾಗವಹಿಸುವವರ ಫೋಟೊವನ್ನೂ ಅಪ್‌ಲೋಡ್‌ ಮಾಡಿ ನಂತರ ಪ್ರಿಂಟ್ ಮಾಡಿಕೊಳ್ಳಬೇಕಿದೆ.

ಮಾಹಿತಿಗಾಗಿ ಪ್ರಾಧಿಕಾರದ ವೆಬ್ಸೈಟ್ http://kea.kar.nic.in ಅಥವಾ https://cetonline.karnataka.gov.in ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !