ಗುರುವಾರ , ಮಾರ್ಚ್ 4, 2021
29 °C
ಮಂಡನೆ ವೇಳೆ ಬಿಜೆಪಿ ಅಬ್ಬರ, ಸಭಾತ್ಯಾಗ

ಪ್ರತಿಭಟನೆ ಮಧ್ಯೆಯೇ ಬಜೆಟ್ ಭಾಷಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನನ್ನ ನಂಬಿಕೆಯೊಂದು ಆಕಾಶ: ನಿಜ, ಅದಕೆ ತಳಬುಡವಿಲ್ಲ; ಆಕಾಶದಲ್ಲಿ ಹೊಳೆವ ನಕ್ಷತ್ರಕ್ಕೆ ಲೆಕ್ಕವಿಲ್ಲ’ ಎಂಬ ಚೆಂಬೆಳಕಿನ ಕವಿ ಚನ್ನವೀರ ಕಣವಿಯವರ ಸಾಲನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಉಲ್ಲೇಖ ಮಾಡುತ್ತಿರುವಾಗಲೇ ಬಿಜೆಪಿ ಸದಸ್ಯರು ಗದ್ದಲ ಎಬ್ಬಿಸುತ್ತಾ ಹೊರ ನಡೆದರು.

ಕುಮಾರಸ್ವಾಮಿ ಅವರು ಮಧ್ಯಾಹ್ನ 12.35ಕ್ಕೆ ಬಜೆಟ್‌ ಭಾಷಣ ಓದಲು ಆರಂಭಿಸಿದರು. ಈ ವೇಳೆ ಎದ್ದು ನಿಂತ ಬಿಜೆಪಿಯ ಜೆ.ಸಿ.ಮಾಧುಸ್ವಾಮಿ ಅವರು, ‘ಕುಮಾರಸ್ವಾಮಿ ಅವರು ವಿಧಾನಸಭಾಧ್ಯಕ್ಷರ ಹೆಸರನ್ನು ಉಲ್ಲೇಖಿಸಿದ್ದಾರೆ. ಈ ಬಗ್ಗೆ ಇಲ್ಲಿ ಚರ್ಚೆಯಾಗಬೇಕು’ ಎಂದು ಒತ್ತಾಯಿಸಿದರು. ಬಿಜೆಪಿಯ ಉಳಿದ ಸದಸ್ಯರು ಇದಕ್ಕೆ ಧ್ವನಿಗೂಡಿಸಿದರು. ಇದಕ್ಕೆ ಪ್ರತಿಯಾಗಿ ಆಡಳಿತ ಪಕ್ಷದ ಸದಸ್ಯರು ‘ಭ್ರಷ್ಟಾಚಾರದ ರೂವಾರಿ ಬಿಜೆಪಿ 420’ ಎಂಬ ಫಲಕಗಳನ್ನು ಪ್ರದರ್ಶಿಸಿದರು. ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ವಾಕ್ಸಮರದ ನಡುವೆಯೇ ಮುಖ್ಯಮಂತ್ರಿ ಓದು ಮುಂದುವರಿಸಿದರು.

 ಆ ಬಳಿಕ ಬಿಜೆಪಿ ಸದಸ್ಯರು ಬಜೆಟ್‌ ಪ್ರತಿಗಳನ್ನು ನೀಡಿಲ್ಲ ಎಂದು ತಗಾದೆ ಎತ್ತಿ ಘೋಷಣೆಗಳನ್ನು ಕೂಗಿದರು. ಇಷ್ಟೆಲ್ಲದರ ನಡುವೆಯೂ ವಿರೋಧ ಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರು ಬಜೆಟ್‌ ಭಾಷಣವನ್ನು ಮೌನವಾಗಿ ಆಲಿಸಿದರು. ಈ ವೇಳೆ, ಬಿಜೆಪಿ ಶಾಸಕರಾದ ಆರ್‌. ಅಶೋಕ, ಎಸ್‌.ಸುರೇಶ್ ಕುಮಾರ್‌ ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕ ವಿ.ಸುನೀಲ್‌ ಕುಮಾರ್ ಚರ್ಚಿಸಿದರು. ನಂತರ ಅಶೋಕ ಅವರು ಯಡಿಯೂರಪ್ಪ ಅವರಲ್ಲಿ ಸಭಾತ್ಯಾಗ ಮಾಡುವ ಬಗ್ಗೆ ಪ್ರಸ್ತಾಪಿಸಿದರು. ಅಳೆದು ತೂಗಿ ಯಡಿಯೂರಪ್ಪ ಸಮ್ಮತಿ ವ್ಯಕ್ತಪಡಿಸಿದರು. ಬಿಜೆಪಿ ಸದಸ್ಯರು ಘೋಷಣೆ ಕೂಗುತ್ತಾ ಸದನದಿಂದ ನಿರ್ಗಮಿಸಿದರು.

ಸುಮಾರು 3 ಗಂಟೆ 15 ನಿಮಿಷ ಬಜೆಟ್‌ ಮಂಡಿಸಿದ ಮುಖ್ಯಮಂತ್ರಿ, ‘ಇದು ಎಚ್‌.ಡಿ.ರೇವಣ್ಣ ಇಲಾಖೆಗೆ’, ‘ಇದು ಡಿ.ಕೆ.ಶಿವಕುಮಾರ್‌ ಇಲಾಖೆಗೆ’ ಎಂದೂ ಹೇಳಿದರು. ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರ ಕ್ಷೇತ್ರ ಕೊರಟಗೆರೆಯ ಪ್ರಸ್ತಾಪವಾದಾಗ, ಉಳಿದ ಸಚಿವರು ‘ಉಪಮುಖ್ಯಮಂತ್ರಿಗಳ ಕ್ಷೇತ್ರಕ್ಕೆ ಭರಪೂರ ಕೊಡುಗೆ’ ಎಂದು ನಕ್ಕರು. ಕುಮಾರಸ್ವಾಮಿ ನಗುತ್ತಲೇ ಮಠ ಮಂದಿರಗಳಿಗೆ ಅನುದಾನ ಘೋಷಣೆ ಮಾಡಿದರು. ಕೃಷಿ ಸಾಲ ಮನ್ನಾ, ಹಾಲಿನ ಪ್ರೋತ್ಸಾಹಧನ ಘೋಷಣೆ ಮಾಡಿದಾಗ ಆಡಳಿತ ಪಕ್ಷದ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು.

ಮಹಾತ್ಮ ಗಾಂಧಿ, ರಾಮ ಮನೋಹರ್‌ ಲೋಹಿಯಾ, ಡಾ.ಎಂ.ಎಸ್‌.ಸ್ವಾಮಿನಾಥನ್‌. ಜೆ.ಎನ್‌.ಟಾಟಾ, ನೆಲ್ಸನ್‌ ಮಂಡೇಲಾ ಅವರ ಉಕ್ತಿಗಳನ್ನು ಉಲ್ಲೇಖಿಸಿದರು. ‘ಕಣ್ಣಿದ್ದು ಕುರುಡರಾಂಗ ಕಿವಿ ಇದ್ದೂ ಕೆಪ್ಪರಾಂಗ, ದೇವರಿದ್ದೂ ದೆವ್ವನಾಂಗಾ ಇರಬಾರ್ದಣಾ ಇರಬಾರ್ದಣಾ’ ಎಂಬ ದ.ರಾ.ಬೇಂದ್ರೆ ಅವರ ಸಾಲುಗಳನ್ನು ಉಲ್ಲೇಖಿಸಿ, ದುರ್ಬಲ ವರ್ಗದವರ ನೋವಿಗೆ ಬೆನ್ನು ಹಾಕುವ ಜಾಯಮಾನ ನಮ್ಮ ಸರ್ಕಾರದಲ್ಲ ಎಂದು ಹೇಳಿಕೊಂಡರು.

* ಇವನ್ನೂ ಓದಿ...

ಸಣ್ಣ ನೀರಾವರಿ, ಅಂತರ್ಜಲ ವೃದ್ಧಿಗೆ ಆದ್ಯತೆ

* ‘ಉಕ್ಕುವ ಹಾಲಿಗೆ ನೀರು ಚಿಮುಕಿಸಿದಂತೆ’

ಅನ್ನದಾತನಿಗೆ ಹತ್ತಾರು ಯೋಜನೆ, ರಾಜ್ಯದಲ್ಲಿ ಪ್ರತ್ಯೇಕ ಬೆಳೆ ವಿಮೆ ಯೋಜನೆ

ಬಜೆಟ್‌: ಯಾರು ಏನಂತಾರೆ?

ಉದ್ಯಮ ವಲಯಕ್ಕೆ ಉತ್ತೇಜಕ ಬುತ್ತಿ 

ಬಜೆಟ್: ಪರಿಶಿಷ್ಟ ವರ್ಗಕ್ಕೆ ಭರ್ಜರಿ ಕೊಡುಗೆ

ಸರ್ಕಾರ ಜನರ ಕಣ್ಣಿಗೆ ಮಣ್ಣೆರಚಿದೆ: ಯಡಿಯೂರಪ್ಪ

ಸಾಲ ಮನ್ನಾಕ್ಕೆ ಇನ್ನೂ ಹಣ ಕೊಡುವೆ: ಕುಮಾರಸ್ವಾಮಿ

ಬೆಂಗಳೂರೇ ಮೊದಲು; ಉಳಿದವು ನಂತರ...

ಪ್ರತಿಭಟನೆ ಮಧ್ಯೆಯೇ ಬಜೆಟ್ ಭಾಷಣ

ಬಜೆಟ್‌ನಲ್ಲಿ ಜಿಲ್ಲಾವಾರು ಹಂಚಿಕೆ; ಸಮತೋಲನದ ಸರ್ಕಸ್

ಬರ ಪರಿಸ್ಥಿತಿ: ಆರ್ಥಿಕ ವೃದ್ಧಿ ದರ ಕುಸಿತ

ಮತ ಫಸಲಿಗಾಗಿ ಕುಮಾರ ಬಿತ್ತನೆ

ವಿಶ್ವವಿಖ್ಯಾತ ತಾಣವಾಗಿ ಬಾದಾಮಿ ಅಭಿವೃದ್ಧಿ

ಸಹಸ್ರ ಶಾಲೆಗಳ ಸ್ಥಾಪನೆ

ಸ್ವಾಮೀಜಿ ಊರುಗಳಲ್ಲಿ ಸಾಂಸ್ಕೃತಿಕ ಕೇಂದ್ರಗಳು

ಹೊಸ ಕ್ರೀಡಾ ವಸತಿ ನಿಲಯಗಳ ಘೋಷಣೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣಕ್ಕೆ ಆದ್ಯತೆ

‘ಮಾತೃಶ್ರೀ’ ಯೋಜನೆ ಸಹಾಯಧನ ಹೆಚ್ಚಳ

ಆನ್‌ಲೈನ್‌ ಮೂಲಕ ಸಿಇಟಿ, ವಿದ್ಯಾರ್ಥಿಗಳಿಗೆ ಡಿಜಿಟಲ್‌ ಅಂಕಪಟ್ಟಿ

ಬಜೆಟ್‌ನಲ್ಲಿ ಮಠಮಾನ್ಯಗಳ ತೃಪ್ತಿಪಡಿಸುವ ಯತ್ನ

ಬಜೆಟ್‌: ಯಾರು ಏನಂತಾರೆ?

ಚಲನಶೀಲ ಬೆಂಗಳೂರಿಗೆ ‘ಮತ್ತೊಂದು ಕಾವೇರಿ’

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು