ಕೊಡಗು: ಪ್ರವಾಹ ಪೀಡಿತ ಪ್ರದೇಶಗಳಿಗೆ ವಿಜ್ಞಾನಿಗಳ ತಂಡ ಭೇಟಿ

ಮಡಿಕೇರಿ: ಜಿಲ್ಲೆಯ ಜೋಡುಪಾಲ, ಮಣ್ಣಂಗೇರಿ, ಎಮ್ಮೆತಾಳು ಪ್ರದೇಶಗಳಿಗೆ ಬೆಂಗಳೂರಿನ ವಿಜ್ಞಾನಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ.
ಭಾರತೀಯ ಭೂ ಸರ್ವೇಕ್ಷಣೆ, ಭೂ ಗರ್ಭಶಾಸ್ತ್ರದ ವಿಜ್ಞಾನಿಗಳು, ರಾಷ್ಟ್ರೀಯ ವಿಪತ್ತು ಪರಿಹಾರ ಕೇಂದ್ರದ ನಿರ್ದೇಶಕರನ್ನು ಒಳಗೊಂಡಿರುವ ತಂಡ ಗುಡ್ಡ ಕುಸಿತದ ಬಗ್ಗೆ ಅಧ್ಯಯನ ನಡೆಸಲಿದೆ.
ಈ ತಂಡ ಸರ್ಕಾರದ ಆದೇಶದ ಮೇರೆಗೆ ತುರ್ತು ವರದಿ ತಯಾರಿಸಲಿದೆ.
ಸದ್ಯ ವೈಜ್ಞಾನಿಕ ಪರಿಕರಗಳೊಂದಿಗೆ ಗುಡ್ಡಗಾಡುಗಳಲ್ಲಿ ಬೀಡುಬಿಟ್ಟಿರುವ ವಿಜ್ಞಾನಿಗಳು, ಮೂಲನಕ್ಷೆ ಹಿಡಿದು ಸ್ಥಳ ಗುರುತು ಪತ್ತೆ ಕಾರ್ಯ ನಡೆಸುತ್ತಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.