ಕೆಆರ್‌ಎಸ್‌ಗೆ ₹ 1 ಕೋಟಿ ಆದಾಯ

7

ಕೆಆರ್‌ಎಸ್‌ಗೆ ₹ 1 ಕೋಟಿ ಆದಾಯ

Published:
Updated:

ಮಂಡ್ಯ: ತುಂಬಿ ನಿಂತಿರುವ ಕೆಆರ್‌ಎಸ್‌ ಜಲಾಶಯವನ್ನು ಕಣ್ತುಂಬಿಕೊಳ್ಳಲು ಬರುವ ಪ್ರವಾಸಿಗರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು ಜೂನ್‌, ಜುಲೈ ತಿಂಗಳಲ್ಲಿ ಕಾವೇರಿ ನೀರಾವರಿ ನಿಗಮಕ್ಕೆ ₹ 1 ಕೋಟಿಗೂ ಹೆಚ್ಚು ಆದಾಯ ಹರಿದು ಬಂದಿದೆ.

ನೀರಿನ ಮಟ್ಟ 120 ಅಡಿ ತಲುಪುತ್ತಿದ್ದಂತೆ ಜಲಾಶಯಕ್ಕೆ ಭೇಟಿ ನೀಡುತ್ತಿರುವ ಪ್ರವಾಸಿಗರ ಸಂಖ್ಯೆ ಅಧಿಕವಾಗಿದೆ. ಜೂನ್‌ ತಿಂಗಳಲ್ಲಿ ₹ 53 ಲಕ್ಷ ಸಂಗ್ರಹವಾಗಿದೆ. ಜುಲೈ 14ರಂದು ನದಿಗೆ ನೀರು ಹರಿಸಿದ ನಂತರ ಜಲಾಶಯ ನೋಡಲು ಜನಜಾತ್ರೆಯೇ ಬಂದಿದೆ.

ನೀರು ಹರಿಯುವ ಗೇಟ್‌ಗಳಿಗೆ ಬಣ್ಣದ ದೀಪ ಅಳವಡಿಸಿದ ನಂತರ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದಾರೆ. ಜುಲೈ 31ರ ವರೆಗೂ ₹ 55 ಲಕ್ಷ ಹಣ ಸಂಗ್ರಹವಾಗಿದೆ ಎಂದು ಕಾವೇರಿ ನೀರಾವರಿ ನಿಗಮದ ಮೂಲಗಳು ತಿಳಿಸಿವೆ. ಬೃಂದಾವನ, ಹಿನ್ನೀರಿನಲ್ಲಿ ಬೋಟಿಂಗ್‌ ಹಾಗೂ ಸಂಗೀತ ಕಾರಂಜಿಗೆ ಪ್ರತ್ಯೇಕ ಶುಲ್ಕ ನಿಗದಿ ಮಾಡಲಾಗಿದೆ.

Tags: 

ಬರಹ ಇಷ್ಟವಾಯಿತೆ?

 • 13

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !